ರೈಲಿನ ಕಿಟಕಿಯಿಂದ ಜಾರಿದ 8 ವರ್ಷದ ಕಂದಮ್ಮ! ಅಪ್ಪ-ಮಗಳ ಕರುಣಾಜನಕ ಕಥೆ ಇದು..

Views: 276
ಕನ್ನಡ ಕರಾವಳಿ ಸುದ್ಧಿ: ಮಗಳೊಂದಿಗೆ ಅಪ್ಪ ರೈಲು ಹತ್ತಿದ್ದ. ಅಪ್ಪನ ಭುಜವೇರಿ ಕುಳಿತಿದ್ದ 8 ವರ್ಷದ ಮಗಳಿಗೆ ರೈಲು ಅಂದ್ರೆ ಏನೋ ಖುಷಿ. ಪ್ರಯಾಣ ಸಾಗ್ತಿದ್ದಂತೆ ಕಂದಮ್ಮ ನಿದ್ದೆಗೆ ಜಾರಿತ್ತು. ಅಪ್ಪನೂ ನಿದ್ದೆಗೆ ಜಾರಿದ್ದ. ರೈಲು ಮುಂದಿನ ನಿಲ್ದಾಣಕ್ಕೆ ಬಂದಿತ್ತು. ಅಲ್ಲಿ ಹತ್ತಿಕೊಂಡ ಪ್ರಯಾಣಿಕರು, ಆ ಕಿಟಕಿಯನ್ನ ಓಪನ್ ಮಾಡಿದ್ದರು. ಅದು ಎಮರ್ಜೆನ್ಸಿ ಕಿಟಕಿ. ಆದ್ರೆ ನಿದ್ರೆಯಲ್ಲಿದ್ದವನಿಗೆ ಯಾಕೋ ಎಚ್ಚರ. ಎದ್ದವನಿಗೆ ಕಂಡ ದೃಶ್ಯದಿಂದ ಎದೆ ಬಡಿದುಕೊಂಡ. ಇಲ್ಲೇ ಇದ್ದ ತನ್ನ ಕಂದಮ್ಮ ಕಿಟಕಿಯಿಂದ ಜಾರಿ ಹೋಗಿತ್ತು.
ಉತ್ತರ ಪ್ರದೇಶದ ಲಲಿತ್ಪುರ ರೈಲು ನಿಲ್ದಾಣದಲ್ಲಿ ನಡೆದ ಕರುಣಾಜನಕ ಘಟನೆ ಇದು. ಮಥುರಾದ ಅರವಿಂದ ತನ್ನ ಮಗಳು ಗೌರಿಯೊಂದಿಗೆ ಕುರುಕ್ಷೇತ್ರದಿಂದ ಮಥುರಾಕ್ಕೆ ಬರುವಾಗ ನಡೆದಿದೆ ಕೂಡಲೇ ರೈಲಿನ ಚೈನ್ ಹಿಡಿದು ಎಳೆದವನೇ ಬಿಕ್ಕಳಿಸಿ ಅತ್ತಿದ್ದ. 112ಗೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದ.. ಮಗಳನ್ನು ಉಳಿಸಲು16 ಕಿ.ಮೀ ಓಡಿದ್ದಾನೆ. ಪೊಲೀಸರು ಮೂರು ತಂಡಗಳಾಗಿ ಕಂದಮ್ಮನನ್ನು ರಕ್ಷಿಸೋ ಕಾರ್ಯಾಚರಣೆ ಆರಂಭಿಸಿದ್ದರು. ಅರವಿಂದ್ ಮಾತ್ರ ಮಗಳನ್ನು ಉಳಿಸಿಕೊಳ್ಳಲು ಓಡ್ತಾನೆ ಇದ್ದ. ಪೊಲೀಸರಿಗಿಂತ ಮುಂಚೆ ವಿರಾರಿ ಸ್ಟೇಷನ್ಗೆ ಬಂದಿದ್ದ. ಅಲ್ಲಿ ಕಾರ್ಗತ್ತಲು. ತಡಕಾಡಿದಾಗ ಸಿಕ್ಕಿದ್ದು ಪೊದೆಗಳು. ಮಗಳು ಗೌರಿ ಅಲ್ಲೇ ಇದ್ಲು. ರೈಲಿನಿಂದ ಬಿದ್ದ ಗೌರಿ ಪ್ರಜ್ಞೆ ತಪ್ಪಿದ್ದಾಳೆ. ಕೂಡಲೇ ಲಲಿತ್ಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಗೌರಿಗೆ ಎಚ್ಚರವಾಗಿದ್ದು, ಆರೋಗ್ಯವಾಗಿದ್ದಾಳೆ ಎಂದು ತಿಳಿದುಬಂದಿದೆ.






