ಆರ್ಥಿಕ

ಕೇವಲ 45 ರೂ.ಕಟ್ಟಿದರೆ; ಬರೋಬ್ಬರಿ 25 ಲಕ್ಷ ಗಳಿಸಿಸೋದು ಹೇಗೆ?

Views: 286

ಕನ್ನಡ ಕರಾವಳಿ ಸುದ್ಧಿ: ನೀವು ರಿಯಲ್ ಎಸ್ಟೇಟ್ ಆಗಲಿ, ಗೋಲ್ಡ್ ಮೇಲಾಗಲಿ, ಸ್ಟಾಕ್ ಮಾರ್ಕೆಟ್ನಲ್ಲಿ ಇನ್ವೆಸ್ಟ್ ಮಾಡಿದ್ರೂ ಇಷ್ಟು ರಿಟರ್ನ್ಸ್ ಸಿಗಲ್ಲ.ಹೆಚ್ಚು ಜನಪ್ರಿಯ ಆಗಿರೋ ಪಾಲಿಸಿ ಜೀವನ್ ಆನಂದ್. ಇದಕ್ಕೆ ಕಾರಣ ಜೀವನ್ ಆನಂದ್ ಜನರಿಗೆ ಹೆಚ್ಚು ರಿಟರ್ಸ್ ನೀಡೋ  ಪಾಲಿಸಿಯಲ್ಲಿ ದಿನಕ್ಕೆ ಕೇವಲ ರೂ. 45 ಕಟ್ಟಿದರೆ 35 ವರ್ಷಗಳಲ್ಲಿ ಬರೋಬ್ಬರಿ 25 ಲಕ್ಷ ರೂ. ಗಳಿಸಬಹುದು.

ಜೀವನ್ ಆನಂದ್ ಪಾಲಿಸಿ ಮಾಡಿಸಿ ಯಾರು ಬೇಕಾದರೂ ಪ್ರತಿನಿತ್ಯ 45 ರೂಪಾಯಿ ಕಟ್ಟಬಹುದು. ಈ ಮೂಲಕ ನಿಮ್ಮ ಜೀವನವನ್ನು ಸಂಪೂರ್ಣ ಸುರಕ್ಷಿತವಾಗಿರಿಸಿಕೊಳ್ಳಬಹುದು. ಈ ಟರ್ಮ್ ಪಾಲಿಸಿಯಲ್ಲಿ 25 ಲಕ್ಷ ಗಳಿಸೋದು ಮಾತ್ರವಲ್ಲ ಜತೆಗೆ ಬೋನಸ್ ಕೂಡ ಇದೆ. ಆಕಸ್ಮಿಕ ಸಾವು ಸಂಭವಿಸಿದ್ರೂ ಹಣ ಸಿಗಲಿದೆ. ಪ್ರೀಮಿಯಂ ಪಾವತಿ ಅವಧಿ ಮೀರಿದ ನಂತರ ಕೂಡ ವಿಮಾ ರಕ್ಷಣೆ ಜಾರಿಯಲ್ಲೇ ಇರಲಿದೆ.

ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟರೆ ರೂ. 5 ಲಕ್ಷ ಹೆಚ್ಚುವರಿ ಕವರೇಜ್ ಸಿಗಲಿದೆ. ಇಷ್ಟೇ ಅಲ್ಲ ಅಪಘಾತದ ಕಾರಣಕ್ಕೆ ನೀವು ಅಂಗವೈಕಲ್ಯ ಅನುಭವಿಸಿದರೆ ಶಾಶ್ವತ ಆರ್ಥಿಕ ಪ್ರಯೋಜನಗಳಿಗಾಗಿ ವಿಮಾ ಮೊತ್ತ ಕಂತುಗಳಲ್ಲಿ ಪಾವತಿಸಲು ಅವಕಾಶ ಇದೆ. ಪಾಲಿಸಿಯನ್ನು ತೆಗೆದುಕೊಳ್ಳುವ ಕನಿಷ್ಠ ವಯಸ್ಸು 18 ವರ್ಷಗಳು. ಕೊನೆಗೆ ಪಾಲಿಸಿದಾರರಿಗೆ ಹೆಚ್ಚುವರಿ ರೂ. 8.60 ಲಕ್ಷ ಬೋನಸ್, ಅಂತಿಮ ಬೋನಸ್ ಆಗಿ ರೂ. 11.50 ಲಕ್ಷ ಸಿಗುತ್ತದೆ.

Related Articles

Back to top button