ಆರ್ಥಿಕ

ಟಾಟಾ ಗ್ರೂಪ್ ಗೆ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ

Views: 130

ಕನ್ನಡ ಕರಾವಳಿ ಸುದ್ಧಿ: ರತನ್ ಟಾಟಾ ಅವರ ನಿಧನದ ಬಳಿಕ ಟಾಟಾ ಗ್ರೂಪ್ ಗೆ ನೂತನ ಅಧ್ಯಕ್ಷರಾಗಿ ರತನ್ ಟಾಟಾ ಸಹೋದರ ನೋಯೆಲ್ ಟಾಟಾ ಅವರು ನೇಮಕಗೊಂಡಿದ್ದಾರೆ

ದೆಹಲಿಯಲ್ಲಿ ಇಂದು ಟಾಟಾ ಟ್ರಸ್ಟ್‌ಗಳ ಮಂಡಳಿ ಸಭೆ ನಡೆದಿದ್ದು, ಅದರಲ್ಲಿ ನೋಯಲ್ ಅವರ ಪರವಾಗಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ 67 ನೇ ವಯಸ್ಸಿನ ನೋಯೆಲ್ ಅವರು, ಸರ್ ದೊರಾಬ್ಬಿ ಟಾಟಾ ಟ್ರಸ್ಟ್‌ನ 11 ನೇ ಅಧ್ಯಕ್ಷ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ನ ಆರನೇ ಅಧ್ಯಕ್ಷರಾಗಿದ್ದಾರೆ.

ರತನ್ ಟಾಟಾ ತಂದೆಯ ಎರಡನೇ ಪತ್ನಿಯ ಮಗ ಈ ನೋಯೆಲ್ ಟಾಟಾ. 40 ವರ್ಷಗಳಿಂದ ಟಾಟಾ ಸಮೂಹದ ಭಾಗವಾಗಿರುವ ನೋಯೆಲ್ ಟಾಟಾ ಅವರು ಪ್ರಸ್ತುತ ಟಾಟಾ ಇಂಟರ್‌ನ್ಯಾಶನಲ್ ಲಿಮಿಟೆಡ್‌ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದಾರೆ.

ಟೈಟಾನ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಗಳಿಗೆ ಉಪಾಧ್ಯಕ್ಷರಾಗಿದ್ದಾರೆ. ಫ್ಯಾಷನ್ ಉಡುಪುಗಳ ಸಂಸ್ಥೆಯ ಚೇರ್ಮನ್ ಆಗಿದ್ದಾರೆ. ಎನ್‌ಬಿಎಫ್‌ಸಿ ಕ್ಷೇತ್ರದ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್ ಸಂಸ್ಥೆಗೂ ಅವರೇ ಮುಖ್ಯಸ್ಥರಾಗಿದ್ದಾರೆ. ಇನ್ನು ವೋಲ್ಟಾಸ್‌ ಸಂಸ್ಥೆಯ ಮಂಡಳಿಯಲ್ಲೂ ಅವರು ಸ್ಥಾನ ಹೊಂದಿದ್ದಾರೆ.

Related Articles

Back to top button