ಇತರೆ

ಅಪ್ಪ ಮಗನ ನಡುವೆ ಜಗಳ, ಬಿಡಿಸಲು ಹೋದ ಅಜ್ಜಿ ಸಾವು

Views: 86

ಮೈಸೂರು: ಅಪ್ಪ-ಮಗನ ನಡುವಿನ ಜಗಳ ಬಿಡಿಸಲು ಹೋಗಿ ಅಜ್ಜಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಅಲ್ಲಯ್ಯನಪುರ ಗ್ರಾಮದಲ್ಲಿ ನಡೆದಿದೆ.

ಅಜ್ಜಿ ನಾಗಮ್ಮ(80) ಮೃತ ದುರ್ದೈವಿ. ಇವರು ಮಗ ಮತ್ತು ಮೊಮ್ಮಗನ ಜಗಳ ಬಿಡಿಸಲು ಹೋಗಿ ಜೀವ ಕಳೆದುಕೊಂಡಿದ್ದಾರೆ. ದಿನನಿತ್ಯದ ಖರ್ಚಿಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ಮಗ ತಂದೆಯ ಜೊತೆ ಜಗಳ ಮಾಡಿದ್ದಾನೆ.

ಇಬ್ಬರ ನಡುವಿನ ಜಗಳ ಜೋರಾಗಿ ನಡೆಯುತ್ತಿತ್ತು. ಇದನ್ನು ಗಮನಿಸಿದ ಅಜ್ಜಿ ನಾಗಮ್ಮ, ಅಲ್ಲಿಗೆ ಬಂದಿದ್ದಾಳೆ. ಜಗಳ ಮಾಡದಂತೆ ಕೇಳಿಕೊಂಡಿದ್ದಾಳೆ. ಆಗ ಕೋಪಿಸಿಕೊಂಡ ಮೊಮ್ಮಗ ಅಜ್ಜಿಯ ಜುಟ್ಟು ಹಿಡಿದು ಕಾಂಕ್ರೀಟ್ ರಸ್ತೆಗೆ ಎಳೆದು, ನಂತರ ತಳ್ಳಿದ್ದಾನೆ. ತಲೆಗೆ ಪೆಟ್ಟುಬಿದ್ದ ಕಾರಣ ಅಜ್ಜಿ ನಾಗಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕೃತ್ಯ ನಡೆದ ನಂತರ ಮೊಮ್ಮಗ ನಾಪತ್ತೆಯಾಗಿದ್ದಾನೆ. ಮೃತ ಅಜ್ಜಿಯ ಸಹೋದರ ನಾಗಣ್ಣ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related Articles

Back to top button
error: Content is protected !!