ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್:ವೀಕ್ಷಕರಿಂದ ಅತಿ ಹೆಚ್ಚು ವೋಟ್ ಪಡೆದ ಚೈತ್ರ ಕುಂದಾಪುರ!

Views: 254
ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದೆ.
ಬಿಗ್ಬಾಸ್ ಶುರುವಾಗುವ ಮುನ್ನವೇ ಒಂದು ರೀತಿ ಸದ್ದು ಮಾಡಿತ್ತು. ಆದರೆ ಇದೀಗ ಬಿಗ್ಬಾಸ್ ಸೀಸನ್ 11 ಸ್ಪರ್ಧಿಗಳ ಮೂಲಕ ಹಾಗೂ ಹೊಚ್ಚ ಹೊಸ ಕಾನ್ಸೆಪ್ಟ್ ಮೂಲಕ ಹೊತ್ತು ಬಂದಿದೆ.

ಸದ್ಯ ಈ ಬಾರಿಯ ಬಿಗ್ಬಾಸ್ ಸೀಸನ್ಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ 17 ಸ್ಪರ್ಧಿಗಳ ಪೈಕಿ 4 ಮಂದಿಯ ಹೆಸರನ್ನು ಶನಿವಾರವೇ ರಿಲೀಸ್ ಮಾಡಲಾಗಿತ್ತು. ಅದರಲ್ಲಿ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಹೆಸರನ್ನು ರಿವೀಲ್ ಮಾಡಲಾಗಿತ್ತು.
ಈ ಬಾರಿಯ ಬಿಗ್ಬಾಸ್ ಸೀಸನ್ 11ಕ್ಕೆ ಎಂಟ್ರಿ ಕೊಡುವ ಸ್ಪರ್ಧಿಗಳು ಸ್ವರ್ಗಕ್ಕಾ ಅಥವಾ ನರಕಕ್ಕಾ ಅಂತ ವೀಕ್ಷಕರು ವೋಟ್ ಮಾಡುವ ಮೂಲಕ ತಿಳಿದಿತ್ತು. ಅದೇ ನಿಯಮದಂತೆ ಈಗಾಗಲೇ ಇಬ್ಬರು ಸ್ಪರ್ಧಿಗಳು ಬಿಗ್ಬಾಸ್ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಇಬ್ಬರು ನೇರವಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ಬಾಸ್ ಸೀಸನ್ 11ರ ಸ್ವರ್ಗಕ್ಕೆ ಗೌತಮಿ ಜಾಧವ್ (1 ಲಕ್ಷದ 16 ಸಾವಿರ) ಹಾಗೂ ಲಾಯರ್ ಜಗದೀಶ್ (2 ಲಕ್ಷ 13 ಸಾವಿರ) ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚೈತ್ರಾ ಕುಂದಾಪುರ (2 ಲಕ್ಷದ 80 ಸಾವಿರ) ಹಾಗೂ ಗೋಲ್ಡ್ ಸುರೇಶ್ ( 1 ಲಕ್ಷದ 38 ಸಾವಿರ) ಇಬ್ಬರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅಚ್ಚರಿ ವಿಚಾರ ಎಂದರೆ ಮೂರು ಜನರ ಪೈಕಿ ವೀಕ್ಷಕರಿಂದ ಅತಿ ಹೆಚ್ಚು ವೋಟ್ ಪಡೆದ ಸ್ಪರ್ಧಿಯೇ ಎಂಎಲ್ಎ ಟಿಕೆಟ್ ಕೊಡಿಸೋದಾಗಿ 7 ಕೋಟಿ ರೂಪಾಯಿ ವಂಚಸಿರೋ ಆರೋಪಿ ತಮ್ಮ ಪ್ರಖರ ಮಾತುಗಳಿಂದಲೇ ಜನರನ್ನು ಸೆಳೆಯುತ್ತಿದ್ದ ಸಾಮಾಜಿಕ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಅವರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.






