ಇತರೆ

ಕುಂದಾಪುರ:ಕಾಳಾವರ ಸ.ಹಿ.ಪ್ರಾ ಶಾಲೆಯ ಸ್ಥಳ ಪರಭಾರೆ ವಿರುದ್ಧ ಸೆ.23 ರಂದು ಶಾಲೆಯನ್ನು ಉಳಿಸಿಕೊಳ್ಳಲು ಶಿಕ್ಷಣಾಭಿಮಾನಿಗಳಿಂದ ಬೃಹತ್ ಧರಣಿ 

Views: 1439

ಕುಂದಾಪುರ: ಶತಮಾನ ಕಳೆದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಾವರ ಈ ಶಾಲೆಯ ಸ್ಥಳ ಕೋರ್ಟ್ ಆದೇಶದಂತೆ ಪರಭಾರೆಯಾಗುತ್ತಿರುವ ಕುರಿತು ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಸರ್ವೆ ನಂಬರ್ 203/2 ರಲ್ಲಿ. 0.67 ಎಕ್ರೆ ಜಮೀನನ್ನು ಮಾನ್ಯ ಸಿವಿಲ್ ನ್ಯಾಯಾಲಯದ ಆದೇಶದಂತೆ ಖಾತೆ ಬದಲಾವಣೆಯಾಗುವ ಸಾಧ್ಯತೆ ಇದೆ.

ಮಾನ್ಯ ಪ್ರಧಾನ ಸಿವಿಲ್ ಜಡ್ಜ್ ಹಾಗು ಜೆ ಎಂ ಎಫ್ ಸಿ ನ್ಯಾಯಾಲಯ ಕುಂದಾಪುರ ಇವರ ಆದೇಶ ಸಂಖ್ಯೆ ಓ ಎಸ್ 50/2016 ದಿನಾಂಕ 27.06.2022ರಂತೆ ಶಾಲೆಯ ಪರವಾಗಿ ಆದೇಶವಾಗಿರುತ್ತದೆ.

ಆದರೆ ಈ ಆದೇಶದ ವಿರುದ್ಧ ವಾದಿಗಳು ಮೇಲ್ಮನವಿ ಸಲ್ಲಿಸಿದಾಗ ಮಾನ್ಯ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯ ಕುಂದಾಪುರ ಇವರು ಮೇಲ್ಕಂಡ ಆದೇಶವನ್ನು ತಳ್ಳಿಹಾಕಿ ಆದೇಶ ಸಂಖ್ಯೆRA22/2022 ದಿನಾಂಕ 17.01.2024 ರಂತೆ ಶಾಲೆಯ ವಿರುದ್ಧವಾಗಿ ತೀರ್ಪು ನೀಡಿ ಪ್ರಕರಣದ ವಾದಿಯವರಾದ ಮಂಜಯ್ಯ ಶೆಟ್ಟಿ ಬಿನ್. ದಿವಂಗತ ನಾರಾಯಣ ಶೆಟ್ಟಿ ಇವರಿಗೆ ಕುಂದಾಪುರ ಕಾಳಾವರ ಗ್ರಾಮದ ಸ.ನಂ 203/2 ರಲ್ಲಿ 0.67 ಎಕ್ರೆ ಜಮೀನಿನ ಹಕ್ಕುದಾರರೆಂದು ಪ್ರತಿವಾದಿಯವರು ಸದ್ರಿ ಜಮೀನನ್ನು3 ತಿಂಗಳ ಒಳಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವಂತೆ ಮಾನ್ಯ ನ್ಯಾಯಾಲಯವು ಆದೇಶ ನೀಡಲಾಗಿದೆ.

ಪ್ರಕ್ರತ ಕುಂದಾಪುರ ತಾಲ್ಲೂಕು ಕಾಳಾವರ ಗ್ರಾಮದ ಸರ್ವೆ ನಂಬರ್ 203/2 ರಲ್ಲಿ 0.67 ಎಕ್ರೆ ಜಮೀನಿನ ಡಿಸ್ಟ್ರಿಕ್ಟ್ ಬೋರ್ಡ್ ಪ್ರೆಸಿಡೆಂಟ್ ಎಂದು ನಮೂದಿಸಿದ್ದು, ಮಾನ್ಯ ನ್ಯಾಯಾಲಯ ಪ್ರಕರಣದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಕಾಳಾವರ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಹಾಗೂ ಗ್ರಾಮ ಪಂಚಾಯತ್ ಕಾಳಾವರ ಇವರು ಪ್ರತಿವಾದಿಗಳಾಗಿರುತ್ತಾರೆ.

ಈ ಪ್ರಕರಣದಲ್ಲಿ ನ್ಯಾಯಾಲಯವು ಸರಕಾರದ ವಿರುದ್ಧ ವ್ಯತಿರಿಕ್ತ ಆದೇಶವಾಗಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರು ಈ ಆದೇಶದ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ RSA1137/2024 ರಂತೆ ಮೇಲ್ಮನವಿ ಸಲ್ಲಿಸಿರುತ್ತಾರೆ. ಆದರೆ ನ್ಯಾಯಾಲಯದ ತಡೆ ಆಜ್ಞೆ ಆದೇಶ ಆಗಿರುವುದಿಲ್ಲ ಈ ಪ್ರಕರಣದಲ್ಲಿ ವಾದಿಗಳು ಶಾಲೆ ಹೆಸರಿನಲ್ಲಿರುವ ಪಹಣಿಯನ್ನು ತಮ್ಮ ಹೆಸರಿಗೆ ಬದಲಾವಣೆ ಬದಲಾಯಿಸುವಂತೆ ಕೋರಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ನ್ಯಾಯಾಲಯ ಕುಂದಾಪುರದಲ್ಲಿ execution petition 94/2024 ರಂತೆ ದಾವೆ ಹೂಡಿರುತ್ತಾರೆ.

ಆದರೆ ಶಾಲಾ ಆರ್ ಟಿ ಸಿ ಯಲ್ಲಿ ಶಾಲೆಯ ಜಮೀನನ್ನು ದಿನಾಂಕ 21.06.1954 ರಂದು ದಾನ ಪತ್ರದ ಮೂಲಕ ಹಸ್ತಾಂತರಿಸಿದ್ದು, ಕುಂದಾಪುರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ದಾನ ಪತ್ತವು ರಿಜಿಸ್ಟ್ರಿ ಆಗಿರುತ್ತದೆ 103 ವರ್ಷಗಳಿಂದ ಗ್ರಾಮದ ಏಕೈಕ ಸರ್ಕಾರಿ ಶಾಲೆಯಾಗಿದ್ದು ಶಿಕ್ಷಣ ಇಲಾಖೆ ವತಿಯಿಂದ ಕಟ್ಟಡದ ವಿಸ್ತರಣೆ ಕಾರ್ಯವು ಆಗಿದೆ. ಈ ಶಾಲೆಯಲ್ಲಿ 134 ವಿದ್ಯಾರ್ಥಿಗಳು ಪ್ರಸ್ತುತ ವರ್ಷದಲ್ಲಿ ಕಲಿಯುತ್ತಿದ್ದು, ಶೇಕಡ 30ರಷ್ಟು SC/ST ಪಂಗಡಕ್ಕೆ ಸೇರಿರುತ್ತಾರೆ. ನ್ಯಾಯಾಲಯದ ಆದೇಶದಂತೆ ಶಾಲಾ ಸ್ಥಳವು ಖಾಸಗಿಯವರ ಪಾಲಾದರೆ ಮಕ್ಕಳ ಶಿಕ್ಷಣದ ಹಕ್ಕು ಕಾರ್ಯಕ್ರಮಕ್ಕೆ ತೊಂದರೆಯಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ.

ಶಾಲೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು, ಶಿಕ್ಷಣಾಭಿಮಾನಿಗಳು ಸೇರಿ ಸೆಪ್ಟೆಂಬರ್ 23ರಂದು ಬೆಳಿಗ್ಗೆ ಕಾಳಾವರ ಗ್ರಾಮ ಪಂಚಾಯತ್ ಕಛೇರಿ ಎದುರು ಧರಣಿ ಮಾಡುವುದೆಂದು ತೀರ್ಮಾನಿಸಲಾಗಿದೆ.

ಶಾಲೆಯ ಸ್ಥಳವನ್ನು ಉಳಿಸಿ ಊರಿನ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಶಾಲಾ ಸ್ಥಳವು ಶಾಲೆಗೆ ದೊರೆಯುವಂತೆ ಮಾಡಲು ಸಹಕಾರ ಕೋರಿದ್ದಾರೆ.

Related Articles

Back to top button
error: Content is protected !!