ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್ಕೇಸ್ ನಲ್ಲಿ ಇರಿಸಿ, ರಸ್ತೆಯ ಬದಿಗೆ ಎಸೆದು ಪರಾರಿ!

Views: 270
ಮಹಿಳೆಯನ್ನು ಕೊಲೆ ಮಾಡಿ ಆಕೆಯ ಶವವನ್ನು ಸೂಟ್ಕೇಸ್ನಲ್ಲಿಟ್ಟು ಅದನ್ನು ಜನವಸತಿ ಪ್ರದೇಶದಲ್ಲಿ ಇಟ್ಟು ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಇಂದು ಬೆಳಿಗ್ಗೆ ಚೆನ್ನೈನಲ್ಲಿ ಎಸೆದಿದ್ದ ಸೂಟ್ಕೇಸ್ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಆಕೆಯನ್ನು ಬೇರೆಡೆ ಕೊಲೆ ಮಾಡಿ ಶವವನ್ನು ಸೂಟ್ಕೇಸ್ನಲ್ಲಿ ಇಟ್ಟು ಅದನ್ನು ತೊರೈಪಾಕ್ಕಂನ ಐಟಿ ಕಾರಿಡಾರ್ಗೆ ಹೊಂದಿಕೊಂಡಿರುವ ವಸತಿ ಪ್ರದೇಶದಲ್ಲಿ ಇಟ್ಟು ಪರಾರಿಯಾಗಿದ್ದಾರೆ.
ಮೃತ ಮಹಿಳೆಯನ್ನು ಮಾದವರಂ ಮೂಲದ ದೀಪ (32)ಎಂದು ಗುರುತಿಸಲಾಗಿದೆ.
ಸೂಟ್ಕೇಸ್ನ ಒಳಗೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯ ಬದಿಯಲ್ಲಿ ಎಸೆದು ಹೋಗಲಾಗಿತ್ತು, ಆಕೆಯ ಸಹೋದರ ನೀಡಿದ ಮಾಹಿತಿಯಂತೆ ಆರೋಪಿಯನ್ನು ಬಂಧಿಸಲಾಗಿದೆ. ಹಣದ ವಿಚಾರವಾಗಿ ಆಕೆಯ ಕೊಲೆ ಆಗಿರುವ ಸಾಧ್ಯತೆ ಇದೆ ಎಂಬ ಶಂಕೆಯಿಂದ ಮಣಿಕಂದನ್ ನನ್ನು ಬಂಧಿಸಿದ್ದಾರೆ.
ಆಕೆಯಿಂದ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಜಗಳ ನಡೆದು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.






