ಸಾಮೂಹಿಕ ಅತ್ಯಾಚಾರಕ್ಕೆ ಯತ್ನ.. ವೈದ್ಯನ ಖಾಸಗಿ ಅಂಗ ಕತ್ತರಿಸಿ ತಪ್ಪಿಸಿಕೊಂಡ ನರ್ಸ್, ಪೋಲಿಸರಿಗೆ ಕರೆ..!!

Views: 363
ಬಿಹಾರದ ಸಮಸ್ಟಿಪುರ ಜಿಲ್ಲೆಯ ಆರ್ಬಿಎಸ್ ಹೆಲ್ತ್ ಕೇರ್ ಸೆಂಟರ್ನಲ್ಲಿ ಈ ಘಟನೆ ನಡೆದಿದೆ. ವೈದ್ಯ ಸಂಜಯ ಕುಮಾರ್ ಮತ್ತು ಇನ್ನಿಬ್ಬರು ನರ್ಸ್ ಮೇಲೆ ಬಲತ್ಕಾರಕ್ಕೆ ಯತ್ನಿಸಿದ್ದಾರೆ. ತಕ್ಷಣವೇ ನರ್ಸ್ ಬ್ಲೇಡ್ ನಿಂದ ವೈದ್ಯನ ಖಾಸಗಿ ಅಂಗ ಕತ್ತರಿಸಿದ್ದಾಳೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದ ನರ್ಸ್ ಪೊಲೀಸರಿಗೆ ಕರೆ ಮಾಡಿದ್ದಾಳೆ.
ನರ್ಸ್ ಕರೆಗೆ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ವೈದ್ಯ ಸಂಜಯ ಕುಮಾರ್, ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮದ್ಯದ ನಶೆಯಲ್ಲಿ ವೈದ್ಯ ಮತ್ತು ಇಬ್ಬರ ತಂಡ ನರ್ಸ್ ಮೇಲೆ ನೀಚ ಕೃತ್ಯಕ್ಕೆ ಯತ್ನಿಸಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ವೈರ್ ಕಟ್ ಮಾಡಿ, ಒಳಗಿನಿಂದ ಲಾಕ್ ಮಾಡಿ ಸಾಮೂಹಿಕ ಬಲತ್ಕಾರಕ್ಕೆ ಯತ್ನಿಸಿದ್ದಾರೆ.
ನರ್ಸ್ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಪೊಲೀಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವೈದ್ಯ ಮತ್ತು ಇನ್ನಿಬ್ಬರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಜೊತೆಗೆ ಬಿಹಾರದಲ್ಲಿ ಮದ್ಯ ಮಾರಾಟ, ಸೇವನೆ ಸಂಪೂರ್ಣ ನಿಷೇಧವಿದ್ದರೂ ಸಹ ಆಕ್ರಮವಾಗಿ ಮದ್ಯ ಸೇವಿಸಿದ ಆರೋಪದಡಿ ಮತ್ತೊಂದು ಕೇಸ್ ದಾಖಲಿಸಿಕೊಂಡಿದ್ದಾರೆ.






