ಇತರೆ
ಮನೆಯ ಛಾವಣಿ ಏಕಾಏಕಿ ಕುಸಿದು ಬಾಲಕಿ ಸಾವು

Views: 84
ಯಾದಗಿರಿ: ಮನಯ ಛಾವಣಿ ಕುಸಿದು 12 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಅರಕೇರಾ ಗ್ರಾಮದಲ್ಲಿ ಗುರುವಾರ ನಡೆದಿದೆ.
ಭಾಗ್ಯಶ್ರೀ (12) ಮೃತಪಟ್ಟವಳು.
ನಿರಂತರ ಮಳೆಯಿಂದಾಗಿ ಮನೆ ನೆನೆದು ಗೋಡೆ ಶಿಥಿಲಗೊಂಡಡಿತ್ತು. ಗುರುವಾರ ಸಹೋದರನಿಗೆ ಊಟ ತರಲೆಂದು ಕೋಣೆಗೆ ತೆರಳಿದ್ದ ವೇಳೆ ಬಾಲಕಿ ಮೇಲೆ ಏಕಾಏಕಿ ಛಾವಣಿ ಕುಸಿದು, ತಲೆ ಮೇಲೆ ಬಿದ್ದು ಗಾಯಗೊಂಡಿದ್ದಾಳೆ.
ಈ ವೇಳೆ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾಳೆ. ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






