ಇತರೆ
ಮಂಗಳೂರು: ಮೂವರು ವಿದ್ಯಾರ್ಥಿಗಳ ಮೇಲೆ ಬಸ್ ನಲ್ಲಿ ಹಲ್ಲೆ

Views: 92
ಮಂಗಳೂರು: ಖಾಸಗಿ ಬಸ್ ನಲ್ಲಿ ಇದ್ದ ಮೂವರು ವಿದ್ಯಾರ್ಥಿಗಳ ಮೇಲೆ ಪ್ರಯಾಣಿಕನೋರ್ವ ಹಲ್ಲೆ ನಡೆಸಿರುವ ಘಟನೆ ಪಡೀಲ್ ಬಳಿಕ ನಾಗುರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅಮೇಮ್ಮಾರ್ ನಿವಾಸಿಗಳಾದ ಸಲ್ಮಾನ್ ಫಾರೀಶ್ (16), ಶಾಝಿಲ್ (15), ರಕಾನ್ ಅರ್ಕುಳ (16) ಹಲ್ಲೆಗೊಳಗಾದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.
ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಫರಂಗಿಪೇಟೆಯಿಂದ ಹತ್ತಿದ್ದರು. ಮುಂದೆ ಹೋಗಿ ಎಂದು ಪ್ರಯಾಣಿಕ ವಿದ್ಯಾರ್ಥಿಗಳೊಂದಿಗೆ ಹೇಳಿದ್ದಾನೆ ಎನ್ನಲಾಗಿದೆ. ಈ ವೇಳೆ ಶಾಝಿಲ್ ಎಂಬ ವಿದ್ಯಾರ್ಥಿಗೆ ಪ್ರಯಾಣಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಇದನ್ನು ಪ್ರಶ್ನಿಸಲು ಹೋದ ಫಾರೀಶ್ ಮತ್ತು ರಕಾನ್ ಗೂ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹ*ಲ್ಲೆಗೊಳಗಾದ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.






