ಇತರೆ

ಅಂಪಾರು: ಅಂದರ್-ಬಾಹರ್ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ; ಆರೋಪಿಗಳ ಬಂಧನ

Views: 255

ಅಂಪಾರು: ಇಲ್ಲಿನ ಹಾಡಿಯೊಂದರಲ್ಲಿ ಅಂದರ್-ಬಾಹರ್ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹಣವನ್ನು ಪಣವಾಗಿಟ್ಟು ಇಸ್ಪೀಟ್‌ ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಶಂಕರನಾರಾಯಣ ಠಾಣೆಯ ಪೊಲೀಸ್‌ ಉಪನಿರೀಕ್ಷಕ ನಾಸೀರ್‌ ಹುಸೇನ್‌ ಅವರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳೀಯರಾದ ವಿಜಯಕರ (48), ಮಂಜುನಾಥ (48) ಶಂಕರನಾರಾಯಣ, ಉಮೇಶ್‌ (39), ಸಂತೋಷ್‌ (45), ರಮೇಶ (48) ಬಂಧಿತ ಆರೋಪಿಗಳು

ಆರೋಪಿಗಳ ಬಳಿ ಇದ್ದ ನಗದು 2,720 ರೂ. ಮತ್ತು ಇಸ್ಪೀಟ್‌ ಜುಗಾರಿಗೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Related Articles

Back to top button
error: Content is protected !!