ಇತರೆ
ಕುಂದಾಪುರ ಬಾರ್‌ನಲ್ಲಿ ಗಲಾಟೆ ಬಾಟಲಿಯಿಂದ ಇರಿತ ;ಇಬ್ಬರು ಗಂಭೀರ ಗಾಯ

Views: 502
ಕುಂದಾಪುರ: ಹಟ್ಟಿಯಂಗಡಿ ಗ್ರಾಮದ ಪಾರ್ತಿಕಟ್ಟೆ ಬಾರ್‌ವೊಂದರಲ್ಲಿ ಯುವಕರ ನಡುವೆ ಗಲಾಟೆ ನಡೆದು ನಂತರ ಬಾಟಲಿಯಲ್ಲಿ ಇರಿತಕ್ಕೊಳಗಾಗಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ಕನ್ಯಾನ ಗ್ರಾಮದ ಇಬ್ಬರು ಯುವಕರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುರುವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಟಲಿಯಿಂದ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಕುಂದಾಪುರದ ಕಂಡ್ಲೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.






