ಇತರೆ

ಸಾಲಬಾದೆ ತಾಳಲಾರದೆ ಗಂಡ-ಹೆಂಡತಿ-ಪುತ್ರಿ ನಾಲೆಗೆ ಹಾರಿ ಆತ್ಮಹತ್ಯೆ 

Views: 195

ಹಾಸನ: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹೇಮಾವತಿ ನಾಲೆಗೆ ಹಾರಿ ಗಂಡ-ಹೆಂಡತಿ ಹಾಗೂ ಪುತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ರೀನಿವಾಸ್ (43), ಶ್ವೇತಾ (36) ಹಾಗೂ ನಾಗಶ್ರೀ (13) ಮೃತ ದುರ್ದೈವಿಗಳು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕೆರೆಬೀದಿಯಲ್ಲಿ ಈ ಘಟನೆ ನಡೆದಿದೆ. ಮೃತ ಶ್ರೀನಿವಾಸ್ ಕಾರು ಚಾಲಕನಾಗಿದ್ದರು. ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶ್ರೀನಿವಾಸ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಕಳೆದ ಮಂಗಳವಾರ ಈ ಮೂವರು ಕಾಣಿಯಾಗಿದ್ದರು. ಕುಟುಂಬಸ್ಥರು ಇವರಿಗಾಗಿ ಎಲ್ಲೆಡೆ ಹುಡುಕಾಡಿದ್ದರಾದರೂ ಅವರು ಪತ್ತೆಯಾಗಿರಲಿಲ್ಲ. ನಂತರ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದಾಗ ನಿನ್ನೆ ಸಂಜೆ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ನಾಲೆಯಲ್ಲಿ ಶ್ರೀನಿವಾಸ್, ಸ್ಮೀತಾ ಶವ ಪತ್ತೆಯಾಗಿದೆ.

ಅಗ್ನಿಶಾಮಕ ದಳದ‌ ಸಿಬ್ಬಂದಿ ಹಾಗೂ ಪೊಲೀಸರು ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪತಿ ಹಾಗೂ ಪತ್ನಿಯ ಶವ ಪತ್ತೆಯಾಗಿದ್ದು ಬಾಲಕಿ ನಾಗಶ್ರೀ ಮೃತದೇಹ ಇನ್ನೂ ಪತ್ತೆ ಆಗಿಲ್ಲಿ. ಹೀಗಾಗಿ ನಾಗಶ್ರೀ ದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.

 

Related Articles

Back to top button
error: Content is protected !!