ಇತರೆ

ಪತ್ನಿಯನ್ನು ದೇವಸ್ಥಾನಕ್ಕೆ ಕರೆದೊಯ್ದ ಪತಿ, ಕಾಡಿನೊಳಗೆ ಕರೆದೊಯ್ದು ಭೀಕರ ಕೊಲೆ

Views: 371

ರಾಮನಗರ:ಪತ್ನಿಯನ್ನು ದೇವಸ್ಥಾನಕ್ಕೆ ಎಂದು ಕರೆದೊಯ್ದ ಪತಿ, ಆಕೆಯನ್ನು ಬೆಟ್ಟದ ಕಾಡಿನೊಳಗೆ ಕರೆದೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ. ಮಾಗಡಿ ತಾಲೂಕಿನ ಊಜಗಲ್ಲು ಬೆಟ್ಟದಲ್ಲಿ ನಿನ್ನೆ ಈ ಕರಾಳ ಕೃತ್ಯ ನಡೆದಿತ್ತು. ದಿವ್ಯಾ (32) ಗಂಡನಿಂದಲೇ ಕೊಲೆಯಾದ ಮಹಿಳೆ. ಉಮೇಶ್ ಪತ್ನಿಯನ್ನು ಹತ್ಯೆಗೈದಿರುವ ಪಾತಕಿ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಪತ್ನಿಯ ಸೌಂದರ್ಯದಿಂದಾಗಿ ಆಕೆಯ ಶೀಲದ ಬಗ್ಗೆ ಅನುಮಾನ ಹೊಂದಿದ್ದ ಉಮೇಶ್‌, ಆಕೆಗೆ ಈ ಕಾರಣಕ್ಕಾಗಿ ಸದಾ ಕಿರುಕುಳ ಕೊಡುತ್ತಿದ್ದ. ಇದೇ ಕಾರಣ ಉಲ್ಬಣಿಸಿ ಕಲಹ ಜೋರಾಗಿದ್ದು, ದಿವ್ಯಾ ಈ ಅನುಮಾನ ಪಿಶಾಚಿಯಿಂದ ದೂರವಾಗಲು ನಿರ್ಧರಿಸಿ ಡೈವೋರ್ಸ್‌ ಮೊರೆ ಹೋಗಿದ್ದಳು.

ದಂಪತಿ ನಿನ್ನೆ ಮಾಗಡಿ ಕೋರ್ಟ್‌ಗೆ ಹಾಜರಾಗಿದ್ದರು. ಬಳಿಕ ನಾಟಕವಾಡಿದ್ದ ಉಮೇಶ್‌, ಪತ್ನಿಯನ್ನು ಊಜಗಲ್ಲು ದೇವಸ್ಥಾನಕ್ಕೆ ಕರೆದೊಯ್ದಿದ್ದ. ಊಜಗಲ್ಲು ಬೆಟ್ಟಕ್ಕೆ ಕರೆದೊಯ್ದು, ಅಲ್ಲಿ ಪೂಜೆ ಮಾಡುವ ವೇಳೆ ದಿವ್ಯಾಳನ್ನು ಹತ್ಯೆ ಮಾಡಿದ್ದಾನೆ. ಕೊಂದು ಚೀಲೂರು ಅರಣ್ಯ ಪ್ರದೇಶದಲ್ಲಿ ಶವ ಎಸೆದು ಎಸ್ಕೇಪ್ ಆಗಿದ್ದಾರೆ.

ಈ ಪ್ರಕರಣದ ಸಂಬಂಧ ಐವರ ಮೇಲೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಕೊಲೆಗೆ ಸಹಕರಿಸಿದ ಇನ್ನೂ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತಿ ಉಮೇಶ್ ಹಾಗೂ ಮತ್ತೊಬ್ಬ ಆರೋಪಿಗಾಗಿ ಪೊಲೀಸರ ತಲಾಶೆ ನಡೆದಿದೆ.

Related Articles

Back to top button
error: Content is protected !!