ಇತರೆ
ಗುಜ್ಜಾಡಿ: ಬೃಹತ್ ಗಾತ್ರದ ಹೆಬ್ಬಾವು ಸೆರೆ

Views: 110
ಗಂಗೊಳ್ಳಿ :ಇಲ್ಲಿಗೆ ಸಮೀಪ ಗುಜ್ಜಾಡಿ ಎಂಬಲ್ಲಿ ಕೋಳಿ ಗೂಡಿಗೆ ಪ್ರವೇಶಿಸಿದ ಹೆಬ್ಬಾವು ಎರಡು ಕೋಳಿಯನ್ನು ತಿಂದು ಮಲಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯ ಕೋಳಿ ಗೂಡಿನಲ್ಲಿ ಎರಡು ಕೋಳಿ ತಿಂದು ಮಲಗಿದ ಹೆಬ್ಬಾವನ್ನು ನೋಡಿದ ಮನೆಯವರು ಆತಂಕಕ್ಕೀಡಾದರು.ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 9 ಅಡಿ ಉದ್ದದ 35 ಕೆಜಿ ತೂಕದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಆನಂದ ಭಂಡಾರಿ, ಜಗನಾಥ, ರವಿ ಪೂಜಾರಿ ಮತ್ತು ಸ್ಥಳೀಯರು ಸಹಕಾರ ನೀಡಿದರು.






