ಇತರೆ

ರಸ್ತೆ ದಾಟುವ ವೇಳೆ ಅಂಗನವಾಡಿ ಬಾಲಕನ ಮೇಲೆ ಹರಿದ ಖಾಸಗಿ ಶಾಲಾ ವಾಹನ ಪುಟಾಣಿ ಸಾವು 

Views: 809

ವಿಜಯಪುರ: ಅಂಗನವಾಡಿ ಬಾಲಕನ ಮೇಲೆ ಖಾಸಗಿ ಶಾಲಾ ವಾಹನ ಹರಿದು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ನಿಡಗುಂಡಿ ತಾ. ಅರಳದಿನ್ನಿ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಮಂಜುನಾಥ ಚೋಪಡೆ (5) ಸಾವನ್ನಪ್ಪಿದ ಬಾಲಕ.

ಬಸವರಾಜ್ ಅಂಗನವಾಡಿಗೆ ಹೊರಟಿದ್ದನು. ರಸ್ತೆ ದಾಟುವ ವೇಳೆ ಬಾಲಕನ ಮೇಲೆ ಖಾಸಗಿ ಶಾಲಾ ವಾಹನ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ನಿಡಗುಂದಿಯ BMS ಶಾಲೆಯ ವಾಹನ ಹರಿದು ಬಸವರಾಜ್ ಮಂಜುನಾಥ ಚೋಪಡೆ ಸಾವನ್ನಪ್ಪಿದ್ದಾನೆ. 5 ವರ್ಷದ ಮಗನ ಸಾವನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಘಟನಾ ಸ್ಥಳಕ್ಕೆ ನಿಡಗುಂದಿ ಪಿಎಸ್‌ಐ ಶಿವಾನಂದ ಪಾಟೀಲ್ ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ. ಈ ವೇಳೆ ಮಗನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

Related Articles

Back to top button
error: Content is protected !!