ಇತರೆ

ಬೊಲೆರೋ ಬೈಕ್‌ಗೆ ಡಿಕ್ಕಿ: ಬಾಲಕಿ ಸಾವು 

Views: 74

ಬೆಳ್ತಂಗಡಿ : ಬೊಲೆರೋ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ನಡೆದಿದೆ.

ಮುಂಡಾಜೆಯ ಸೀಟು ಬಳಿ ಈ ಅಪಘಾತ ನಡೆದಿದ್ದು ಬೈಕ್ ಸವಾರ ಕಲ್ಮಂಜ ಕುಡೆಂಚಿಯ ಬೈಕ್ ಸವಾರ ಗುರುಪ್ರಸಾದ್ ಗೋಖಲೆ  ಅವರ ಪುತ್ರಿ ಉಜಿರೆ ಎಸ್‌ಡಿಎಂ ಶಾಲೆಯಲ್ಲಿ ನಾಲ್ಕನೇ ತರಗತಿಯ ಅನರ್ಘ್ಯ ಅವರ ತಲೆಗೆ  ತೀವ್ರ ಸ್ವರೂಪದ ಗಂಭೀರ ಗಾಯವಾಗಿದ್ದು, ಮಗುವಿನ ತಲೆಯ ಮೇಲೆ ಬೊಲೆರೋ ಟಯರ್ ಹರಿದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದೆ.ಗುರುಪ್ರಸಾದ್ ಗೋಕಲೆಯವರ ಕಾಲು ಮುರಿದಿದೆ.

ಅಪಘಾತ ನಡೆಸಿದ ಬೊಲೇರೋ ವಾಹನ ನಿಲ್ಲಿಸದೇ ಪರಾರಿಯಾಗಿದ್ದು, ಸ್ಥಳೀಯರು ವಾಹನವನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ನೆರಿಯಾ ಗ್ರಾಮದ ನಾಲ್ವರು ಬೊಲೆರೋದಲ್ಲಿ ಪ್ರಯಾಣಿಸುತ್ತಿದ್ದು ಅವರನ್ನು ಸಾರ್ವಜನಿಕರು ಹಿಡಿದಿದ್ದಾರೆ.

 

Related Articles

Back to top button
error: Content is protected !!