ಇತರೆ

ಆತ್ಮಹತ್ಯೆಗೆಂದು ನೇಣು ಬಿಗಿದಾಗ ಹಗ್ಗ ತುಂಡಾಗಿ ಬಿದ್ದು ಆಸ್ಪತ್ರೆಯಲ್ಲಿ ಮಹಿಳೆ ಸಾವು 

Views: 132

ಆತ್ಮಹತ್ಯೆಗೆಂದು ನೇಣು ಬಿಗಿದಾಗ ಹಗ್ಗ ತುಂಡಾಗಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಸಾವಿಗೀಡಾದ ಘಟನೆ ಕುಂಬ್ಳೆ ಯಲ್ಲಿ ನಡೆದಿದೆ.

ಬಂದ್ಯೋಡು ಅಡ್ಕ ಒಳಯಂ ರೋಡ್‌ ನಿವಾಸಿ ದಿ| ಮೂಸ ಅವರ ಪುತ್ರಿ ಆಯಿಶತ್‌ ರಿಯಾನಾ (24) ಸಾವಿಗೀಡಾದವರು. ಜು. 23ರಂದು ತಾಯಿ ಮನೆಯ ಬಾತ್‌ ರೂಂನಲ್ಲಿ ಆಯಿಶತ್‌ ರಿಯಾನಾ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು.

ಈ ವೇಳೆ ಹಗ್ಗ ತುಂಡಾಗಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದ್ದರೂ, ರಕ್ಷಿಸಲು ಸಾಧ್ಯವಾಗಲಿಲ್ಲ.

ಆಯಿಶತ್‌ ರಿಯಾನಾ ಅವರ ವಿವಾಹ ಮೂರೂವರೆ ವರ್ಷಗಳ ಹಿಂದೆ ಬಶೀರ್‌ ಅವರೊಂದಿಗೆ ನಡೆದಿತ್ತು. ಈ ಸಂದರ್ಭದಲ್ಲಿ 15 ಪವನ್‌ ಚಿನ್ನಾಭರಣ ನೀಡಲಾಗಿತ್ತೆನ್ನಲಾಗಿದೆ. ಇವರಿಗೆ ಎರಡೂವರೆ ವರ್ಷದ ಮೊಹಮ್ಮದ್‌ ಬಿಲಾಲ್‌ ಎಂಬ ಪುತ್ರನಿದ್ದಾನೆ. ಮಗು ಜನಿಸಿದ ಆರು ತಿಂಗಳ ಬಳಿಕ ಆಯಿಶತ್‌ ರಿಯಾನಾ ಅವರನ್ನು ಪತಿ ಹಲ್ಲೆಗೈದು ತಾಯಿ ಮನೆಗೆ ತಂದು ಬಿಟ್ಟಿದ್ದರೆಂದು ಆಯಿಶತ್‌ ರಿಯಾನಾ ಚಿಕ್ಕಪ್ಪ ಮೆಹಮೂದ್‌ ಅಡ್ಕ ತಿಳಿಸಿದ್ದಾರೆ.

Related Articles

Back to top button
error: Content is protected !!