ಇತರೆ

12 ಕಾಲ್ಬೆರಳುಗಳು,13 ಕೈ ಬೆರಳುಗಳು ಸೇರಿ 25 ಬೆರಳುಗಳುಳ್ಳ ಅಪರೂಪದ ಮಗು ಜನನ

Views: 115

ಕನ್ನಡ ಕರಾವಳಿ ಸುದ್ದಿ: ಬಾಗಲಕೋಟೆ ಜಿಲ್ಲೆಯ ರಬಕವಿಯ ಸನ್‌ಶೈನ್ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 35 ವರ್ಷದ ತಾಯಿ ಭಾರತಿ ಅವರಿಗೆ 12 ಕಾಲ್ಬೆರಳುಗಳು ಮತ್ತು 13 ಕೈ ಬೆರಳುಗಳೊಂದಿಗೆ ಅಪರೂಪದ ಗಂಡು ಶಿಶು ಜನನವಾಗಿದೆ.

ಮಗುವಿನ ಬಲಗೈಗೆ 6 ಎಡಗೈಗೆ 7 ಮತ್ತು ಕಾಲಿನಲ್ಲಿ 6 ಮತ್ತು6  ಬೆರಳುಗಳಿವೆ.

ಅಪರೂಪದ ಮಗುವನ್ನು ನೋಡಿದ ನಂತರ ವೈದ್ಯರು ಆಶ್ಚರ್ಯಗೊಂಡರು. ನವಜಾತ ಶಿಶುವನ್ನು ನೋಡಲು ಅಪಾರ ಜನರು ಜಮಾಯಿಸಿದ್ದರು. ಮಗುವಿನ ಜನನದಿಂದ ಕುಟುಂಬವು ಸಂತೋಷಗೊಂಡಿದೆ.

ಕುಂದರಗಿಯ ಭುವನೇಶ್ವರಿ ದೇವಿಗೆ ತೆರಳಿ ಮಕ್ಕಳಾಗುವಂತೆ ಹರಕೆಹೊತ್ತಾಗ ಈ ಬೇಡಿಕೆಯು 4ನೇ ವಾರದಲ್ಲಿಯೇ ಗರ್ಭಿಣಿಯಾಗುವ ಅವಕಾಶ ದೊರಕಿತು.ಎಂದು ಕುಟುಂಬದವರು ಸಂತಸ ಹಂಚಿಕೊಂಡಿದ್ದಾರೆ.

ಶಸ್ತ್ರಕ್ರಿಯೆ ನಡೆಸಿದ ಪ್ರಸೂತಿ ಹಾಗು ಸ್ತ್ರೀರೋಗ ವೈದ್ಯರಾದ ಡಾ. ಪಾರ್ವತಿ ಹಿರೇಮಠ ಮಾತನಾಡಿ, ಅಪರೂಪದಲ್ಲಿ ಅಪರೂಪವಾಗಿ ಕ್ರೋಮೋಸೋಮ್‌ಗಳಿಂದ ಇಂತಹ ಮಗುವಿನ ಜನನವಾಗುತ್ತದೆ. 25 ಬೆರಳುಗಳನ್ನು ಹೊಂದಿದ ಗಂಡು ಮಗುವಿನೊಂದಿಗೆ ತಾಯಿಯೂ ಕ್ಷೇಮವಾಗಿದ್ದಾಳೆಂದು ತಿಳಿಸಿದರು.

Related Articles

Back to top button
error: Content is protected !!