ಕರಾವಳಿ
ಕುಂದಾಪುರ ಪುರಸಭೆಯ ಮಾಜಿ ಸದಸ್ಯ ಸುರೇಶ್ ನಾಯಕ್ ನಿಧನ

Views: 94
ಕುಂದಾಪುರ: ಇಲ್ಲಿನ ಪುರಸಭೆಯ ಮಾಜಿ ಸದಸ್ಯ ಸುರೇಶ್ ನಾಯಕ್ (63) ಹೃದಯಾಘಾತದಿಂದ ಶನಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಅವರು ಮುದ್ದುಗುಡ್ಡೆ ವಾರ್ಡಿನಲ್ಲಿ ಎರಡು ಬಾರಿ ಸದಸ್ಯರಾಗಿ, ಒಂದು ಅವಧಿಗೆ ಪುರಸಭೆಯ ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಕಾಮತ್ ಕಾರ್ಖಾನೆಯಲ್ಲಿ ಸೂಪರ್ ವೈಸರ್ ಆಗಿ ಸೇವೆ ಸಲ್ಲಿಸಿದ್ದು, ಕರಾವಳಿ ಕ್ರಿಕೆಟರ್ಸ್ ಇದರ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ನಿಧನಕ್ಕೆ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾಧ್ಯಕ್ಷ ಬಿ ಕಿಶೋರ್ ಕುಮಾರ್, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ, ಮಂಗಳೂರು ಸಹ ಪ್ರಭಾರಿ ರಾಜೇಶ್ ಕಾವೇರಿ ಮೃತರ ಅಂತಿಮ ದರ್ಶನ ಪಡೆದರು.






