ಕರಾವಳಿ

ಕರಾವಳಿಯಲ್ಲಿ ಬಿಟ್ಟು ಬಿಡದ ಧಾರಾಕಾರ ಮಳೆ:ಜನಜೀವನ ತತ್ತರ

Views: 114

ಕುಂದಾಪುರ: ಕರಾವಳಿ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ನಿರಂತರ ಭಾರಿ ಮಳೆ ಆಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ವರುಣನ ಅಬ್ಬರಕ್ಕೆ ನಲುಗಿದ್ದು ಭಾರಿ ಮಳೆಯಿಂದ ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡು ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ.

ಕಳೆದ 15 ದಿನಗಳಿಂದ ತಾಲೂಕಿನ ವಕ್ವಾಡಿ ಎಂಬಲ್ಲಿ ಕೃಷಿ ಭೂಮಿಗಳು ಸಂಪೂರ್ಣ ಜಲಾವೃತಗೊಂಡಿದೆ.

ಕರಾವಳಿಯಾದ್ಯಂತ  ಬಾರಿ ಮಳೆಯಿಂದಾಗಿ ಕೃಷಿ ಭೂಮಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಿದ್ಯುತ್ ಕಂಬಗಳು ಧರಶಾಹಿಯಾಗಿವೆ, ಇಲ್ಲಿನ ಕಾಲು ಸಂಕಗಳು, ಸೇತುವೆಗಳು ಅಪಾಯ ಸ್ಥಿತಿಯಲ್ಲಿ ಇರುವುದರಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾನಿಗೀಡಾಗಿದೆ‌.

ಕಡಲಬ್ಬರ ಹೆಚ್ಚಾಗಿರುವ ಕಾರಣ ಪ್ರವಾಸಿಗರಿಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ನದಿ-ಹಳ್ಳ, ವಿದ್ಯುತ್ ಕಂಬ-ತಂತಿಗಳ ಬಳಿ ಹೋಗದಂತೆ ಎಚ್ಚರಿಕೆ ವಹಿಸಬೇಕು, ಸಾರ್ವಜನಿಕರು ಅಪಾಯಕಾರಿ ಸಂದರ್ಭಗಳಿಂದ ದೂರವಿರಬೇಕು ಮತ್ತು ಸಂಭವನೀಯ ಹಾನಿಯನ್ನು ತಡೆಗಟ್ಟಲು ಜಿಲ್ಲಾಡಳಿತದ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಪ್ರಾಕೃತಿಕ ವಿಕೋಪದಿಂದ ಯಾವುದೇ ಘಟನೆಗಳು ಅಥವಾ ಸಂಭವಿಸುವ ಸೂಚನೆಯ ಸಂದರ್ಭದಲ್ಲಿ ಸಾರ್ವಜನಿಕರು ತಕ್ಷಣವೇ ಸಂಬಂಧಪಟ್ಟ ಪಂಚಾಯತ್-ನಗರ ಸ್ಥಳೀಯ ಸಂಸ್ಥೆಗಳಿಗೆ ತಿಳಿಸಲು ಸೂಚಿಸಲಾಗಿದೆ.

Related Articles

Back to top button
error: Content is protected !!