ಇತರೆ

ತಂದೆ- ಮಗ ಕೈ ಕೈ ಹಿಡಿದುಕೊಂಡು ರೈಲು ಹಳಿಗಳ ಮೇಲೆ ಮಲಗಿ ಆತ್ಮಹತ್ಯೆ 

Views: 170

ಮುಂಬೈ :ಯುವಕನೊಬ್ಬ ತನ್ನ ತಂದೆಯ ಜೊತೆಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸೆರೆಯಾದ ವಿಡಿಯೊದಲ್ಲಿ ತಂದೆ, ಮಗ ಇಬ್ಬರು ರೈಲು ನಿಲ್ದಾಣದಲ್ಲಿ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿರುವುದು ಕಾಣುತ್ತದೆ. ಈ ಸಮಯದಲ್ಲಿ ತಂದೆ ಮಗ ಇಬ್ಬರು ಎದುರಿಗೆ ಬರುತ್ತಿರುವ ರೈಲನ್ನು ಕಂಡು ಕೈ ಕೈ ಹಿಡಿದುಕೊಂಡು ಹಳಿಗಳ ಮೇಲೆ ಮಲಗಿದ್ದಾರೆ. ಇದರಿಂದ ರೈಲು ಅವರ ಮೇಲೆ ಹರಿದು ಇಬ್ಬರೂ ದಾರುಣವಾಗಿ ಸಾವನಪ್ಪಿದ್ದಾರೆ

ಆ ನಿಲ್ದಾಣದಲ್ಲಿ ಇವರಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಕಾಣುತ್ತಿಲ್ಲ. ಈ ಸಮಯದಲ್ಲಿ ತಂದೆ ಮಗ ಇಬ್ಬರೂ ಎದುರಿಗೆ ಬರುತ್ತಿರುವ ರೈಲನ್ನು ಕಂಡು ಕೈ ಕೈ ಹಿಡಿದುಕೊಂಡು ಹಳಿಗಳ ಮೇಲೆ ಮಲಗಿದ್ದಾರೆ. ಇದರಿಂದ ರೈಲು ಅವರ ಮೇಲೆ ಹರಿದು ಇಬ್ಬರು ದಾರುಣವಾಗಿ ಸಾವನಪ್ಪಿದ್ದಾರೆ.

ಈ ದೃಶ್ಯ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಘಟನೆ ಸೋಮವಾರ ಬೆಳಿಗ್ಗೆ 9:30ರ ಸುಮಾರಿಗೆ ಸ್ಥಳೀಯ ರೈಲು ಪಾಲ್ಘರ್ ಜಿಲ್ಲೆಯ ಬಯಂದರ್ ನಿಲ್ದಾಣದಲ್ಲಿ ನಡೆದಿದೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೃತರನ್ನು ವಸಾಯಿ ನಿವಾಸಿಗಳಾದ ಜಯ್ ಮೆಹ್ತಾ (33) ಮತ್ತು ಅವರ ತಂದೆ ಹರೀಶ್ ಮೆಹ್ತಾ (60) ಎಂದು ಗುರುತಿಸಲಾಗಿದೆ. ತಮ್ಮ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಬಾರದು ಎಂದು ಹರೇಶ್ ಮೆಹ್ತಾ ಮನೆಯಲ್ಲಿ ಆತ್ಮಹತ್ಯೆ ಪತ್ರವನ್ನು ಬರೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಹರೇಶ್ ಅವರ ಪತ್ನಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿಧನರಾಗಿದ್ದರು ಮತ್ತು ಜಯ್ ಅವರು ಕಳೆದ ವರ್ಷ ವಿವಾಹವಾಗಿದ್ದರು. ವಸಾಯಿಯಲ್ಲಿರುವ ಅವರ ಅಪಾರ್ಟ್ಮೆಂಟ್‍ನಲ್ಲಿ ಹರೀಶ್, ಜಯ್ ಮತ್ತು ಅವರ ಪತ್ನಿ ಮಾತ್ರ ವಾಸಿಸುತ್ತಿದ್ದರು. ಆದರೆ ಅವರ ಈ ಸಾವಿಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. ಹಾಗಾಗಿ ಪೊಲೀಸರು ಷೇರು ವ್ಯಾಪಾರದಲ್ಲಿ ನಷ್ಟದಿಂದಾಗಿ ಅಥವಾ ಯಾವುದೇ ಹಣಕಾಸಿನ ಒತ್ತಡ ಸೇರಿದಂತೆ ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ

Related Articles

Back to top button
error: Content is protected !!