ಉಡುಪಿ:ಅತ್ರಾಡಿಯಲ್ಲಿ ಮನೆಯ ಮಾಡು ಕುಸಿತ, ಪ್ರಾಣಾಪಾಯದಿಂದ ಪಾರು

Views: 358
ಉಡುಪಿ ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವ ಗಾಳಿ ಮಳೆಗೆ ಮನೆಯ ಮಾಡು ಕುಸಿದು ಬಿದ್ದು ಮನೆಯವರು ಪ್ರಾಣಾಪಾಯದಿಂದ ಪಾರಾದ ಘಟನೆ ಆತ್ರಾಡಿ ಮದಗ ಎಂಬಲ್ಲಿ ರವಿವಾರ ಬೆಳಗಿನ ಜಾವ ನಡೆದಿದೆ.
ಇಲ್ಲಿನ ನಿವಾಸಿ ಕೃಷ್ಣಶೆಟ್ಟಿಗಾರ್ ಎಂಬುವವರು ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಮಲಗಿದಾಗ 2:30ರ ಹೊತ್ತಿಗೆ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಮಾಡಿನ ಶಬ್ದ ಕೇಳುತ್ತಿದ್ದಂತೆ ಮನೆಯವರಿಗೆ ಎಚ್ಚರವಾದ್ದರಿಂದ ಅಲ್ಲಿಂದ ಓಡಿ ಬಂದಾಗ ಮಾಡು ಸಂಪೂರ್ಣವಾಗಿ ಕುಸಿದು ಬಿದ್ದಿದೆ ಮನೆಯವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುಮಾರು 3ರಿಂದ 4ಲಕ್ಷದವರೆಗೆ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ
ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಸತ್ಯಾನಂದ ನಾಯಕ್ ಮತ್ತು 35 ಜನರ ತಂಡದವರು ಸ್ಥಳಕ್ಕೆ ಆಗಮಿಸಿ ಗೋಡೆಯು ಸಹ ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಮನೆಯವರನ್ನು ಸ್ಥಳಾಂತರಿಸಿದ್ದಾರೆ. ಇವರಿಗೆ ನೆಲೆ ನಿಲ್ಲಲು ತಾತ್ಕಾಲಿಕ ಶೆಡ್ಡನ್ನು ಮಾಡಿಕೊಡುತ್ತಿದ್ದಾರೆ.
ಸ್ಥಳಕ್ಕೆ ಪಂಚಾಯಿತಿ ಸದಸ್ಯರು ತಹಶೀಲ್ದಾರ್ ಭೇಟಿ ನೀಡಿ ಮನೆಯ ಹಾನಿಯ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ ಪರಿಹಾರ ನೀಡಲು ಕ್ರಮ ಕೈಗೊಂಡಿದ್ದಾರೆ.








