ಕರಾವಳಿ

ಕುಂದಾಪುರ: ಕಮಲಶಿಲೆ, ಮಾರಣಕಟ್ಟೆ ದೇಗುಲಕ್ಕೆ ನುಗ್ಗಿದ ನೀರು

Views: 226

ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಧಾರಾಕಾರ ಮಳೆಗೆ ಪಶ್ಚಿಮ ಘಟ್ಟದ ತಪ್ಪಲಿನ ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ದೇಗುಲ ಜಲಾವೃತಗೊಂಡಿದೆ. ಪ್ರತಿ ವರ್ಷ ಇಲ್ಲಿನ ಕುಜ್ಜ ನದಿ ಭರ್ತಿಯಾಗಿ ಗಂಗೆ ಸ್ಥಾನದ ಮೂಲಕ ದೇಗುಲ ಪ್ರವೇಶಿಸುತ್ತದೆ. ಅದೇ ರೀತಿ ನಿನ್ನೆ ರಾತ್ರಿ ಒಂದು ಗಂಟೆಗೆ ಸರಿಯಾಗಿ ದೇಗುಲದೊಳಗೆ ನೀರು ಪ್ರವೇಶಿಸಿತು. ಅರ್ಚಕರು ಪ್ರಥಮ ಪೂಜೆ ನೆರವೇರಿಸಿದರು.

ಕೊಲ್ಲೂರು ಸಮೀಪದ ಶ್ರೀ ಕ್ಷೇತ್ರ ಮಾರಣಕಟ್ಟೆ ದೇಗುಲದ ಆವರಣಕ್ಕೂ ನೀರು ನುಗ್ಗಿ ಕೃತಕ ನೆರೆ ಉಂಟಾಯಿತು. ಬೈಂದೂರು ಪರಿಸರದ ಸುತ್ತಮುತ್ತಲಿನಲ್ಲಿ ಮನೆಗಳು ಹಾಗೂ ಜಮೀನಿಗಳಿಗೆ ನೀರು ನುಗ್ಗಿದೆ. ಜನರನ್ನು ದೋಣಿಯ ಮೂಲಕ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಯಿತು.

 

Related Articles

Back to top button
error: Content is protected !!