ಇತರೆ

ಆಟೋ ಚಾಲಕನನ್ನು ಇರಿದು ಕೊಲೆ: ಮರಕ್ಕೆ ನೇಣು ಬಿಗಿದಿರುವ ಸ್ಥಿತಿಯಲ್ಲಿ ಶವ ಪತ್ತೆ 

Views: 104

ಕಲಬುರಗಿ: ಚಾಕುವಿನಿಂದ ಇರಿದು ಆಟೋ ಚಾಲಕನ ಬರ್ಬರ ಹತ್ಯೆಗೈದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ.

ಗೋಪಾಲ್ ಜಾಧವ್ (48) ಕೊಲೆಯಾದ ಆಟೋ ಚಾಲಕನೆಂದು ತಿಳಿದು ಬಂದಿದೆ.

ಸಂಜೆ ಜಮೀನಿಗೆ ತೆರಳಿದ್ದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಬಳಿಕ ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿದ್ದಾರೆ ಎನ್ನಲಾಗಿದೆ.

ಮರಕ್ಕೆ ನೇಣು ಬಿಗಿದಿದ್ದ ಶವ ಮರದಿಂದ ಕೆಳಗೆ ಹಗ್ಗ ಕಡಿದು ಬಿದ್ದಿರುವ ಶವವನ್ನು ಜನ ನೋಡಿ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದು ಕುಂಚಾವರಂ  ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Related Articles

Back to top button
error: Content is protected !!