ಕರಾವಳಿ

ಕುಂದಾಪುರ:ವಿನಾಯಕ ಸ್ಟೋರ್ ಮಾಲಕ ಕೆ.ರವಿ ಹೃದಯಾಘಾತದಿಂದ ನಿಧನ

Views: 371

ಕುಂದಾಪುರ ಸಂತೆ ಮಾರುಕಟ್ಟೆ ಎದುರಿನ ವಿನಾಯಕ ಸ್ಟೋರ್ ಮಾಲಕ ಕೆಂಚಮ್ಮನ ಮನೆಯ ನಿವಾಸಿ ಕೆ.ರವಿ(53) ಜೂನ್.29ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ಅವರು ಕುಂದಾಪುರದ ಮೀನು ಮಾರುಕಟ್ಟೆ ಬಳಿಯಲ್ಲಿ ವಿನಾಯಕ ಸ್ಟೋರ್ ನೆಡೆಸುತ್ತಿದ್ದರು.ಜೊತೆಯಲ್ಲಿ ಕೋಳಿಮಾಂಸ ಮಾರಾಟದ ವ್ಯವಹಾರ ನಡೆಸುತ್ತಿದ್ದರು.

ರವಿ ಎಂಬುವರು ಶುಕ್ರವಾರ ವ್ಯವಹಾರ ಮುಗಿಸಿ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಶನಿವಾರ ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಉಸಿರಾಟದ ತೊಂದರೆಗೆ ಒಳಗಾಗಿದ್ದು, ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಮಣಿಪಾಲ ಕೆಎಂಸಿಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.ರಾಮಕ್ಷತ್ರಿಯ ಯುವಕ ಮಂಡಲ ಸಹಿತ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

Related Articles

Back to top button
error: Content is protected !!