ಇತರೆ
ಜಾತ್ರೆ ಸಂಭ್ರಮದ ಮಧ್ಯೆ ತಗಡಿನ ಶೆಡ್ ಮೇಲೆ ವಿದ್ಯುತ್ ತಂತಿ ಬಿದ್ದು ಇಬ್ಬರು ಸಾವು

Views: 59
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ದಾಸರಮಡ್ಡಿಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ತುಂಡಾಗಿ ತಗಡಿನ ಶೆಡ್ ಮನೆ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರು ಸಂತೋಷ (22) ಮತ್ತು ಸಂತೋಷ್ ಅತ್ತೆ ಶೋಭಾ (32) ಎಂದು ತಿಳಿದುಬಂದಿದೆ. ಶ್ರೀಕಾಂತ್, ಮಹೇಶ್, ಕಸ್ತೂರಿ ಹಾಗೂ ಸಂಗೀತಾ ಕಾಮಶೆಟ್ಟಿ ಸೇರಿ ನಾಲ್ವರಿಗೆ ಗಾಯವಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಗಲಕೋಟೆಯ ದಾಸರಮಡ್ಡಿಯಲ್ಲಿ ದುರ್ಗಾದೇವಿ ಜಾತ್ರೆಯಿತ್ತು. ಜಾತ್ರೆಗಾಗಿ ಸಂಬಂಧಿಕರು ಮನೆಗೆ ಬಂದಿದ್ದರು ಈ ವೇಳೆ ಅವಘಡ ಸಂಭವಿಸಿದೆ.
ಇನ್ನು ಮೃತ ಸಂತೋಷ್ ಹಾಗೂ ಗಾಯಗೊಂಡಿರುವ ಸಂಗೀತಾ ನಡುವೆ ನಿಶ್ಚಿತಾರ್ಥವಾಗಿದ್ದು, ಮದುವೆ ನಿಗದಿಯಾಗಿತ್ತು. ಆದರೆ ದುರಾದೃಷ್ಟವಶಾತ್ ಸಂತೋಷ್ ಮೃತಪಟ್ಟಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ತೇರದಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






