ಇತರೆ

ಆಶ್ರಯ ನೀಡುವ ನೆಪದಲ್ಲಿ ಮಹಿಳೆಯನ್ನು ಕೊಲೆ ಮಾಡಿ ದೇಹದ ತುಂಡುಗಳನ್ನು ರೈಲಿನಲ್ಲಿ ಪಾರ್ಸೆಲ್‌ !

Views: 91

ಇಂಧೋರ್‌: ಮಹಿಳೆಯನ್ನು ಎಳೆದೊಯ್ದ 60 ವರ್ಷದ ಕಾಮುಕ ಅತ್ಯಾಚಾರ ಎಸಗಿ ಹತ್ಯೆ ಮಾಡಿ  ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿದ ಬಳಿಕ ಎರಡು ರೈಲಿನಲ್ಲಿ ಮೃತದೇಹ ತುಂಡುಗಳನ್ನು ಪಾರ್ಸೆಲ್ ಮಾಡಿದ ಘಟನೆ ನಡೆದಿದೆ.

ಆರೋಪಿಯನ್ನು 60 ವರ್ಷ ಕಮಲೇಶ್ ಪಟೇಲ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪತಿಯೊಂದಿಗೆ ಜಗಳ ಮಾಡಿದ 36 ವರ್ಷದ ಮಹಿಳೆ ಉಜ್ಜೈನಿ ರೈಲು ನಿಲ್ದಾಣದಲ್ಲಿ ಕುಳಿತಿದ್ದಳು. ಮಥುರಾಗೆ ತೆರಳಲು ರೈಲಿಗಾಗಿ ಕಾಯುತ್ತಿದ್ದ ಮಹಿಳೆಗೆ ಆಶ್ರಯ ನೀಡುವ ನೆಪದಲ್ಲಿ ಬಂದ ಕಮಲೇಶ್‌ ಪಟೇಲ್‌ ಆಕೆಯನ್ನು ಪಕ್ಕದಲ್ಲೇ ಇರುವ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಮನೆಯಲ್ಲಿ ಆಕೆಗೆ ತಿನ್ನುವ ಊಟದಲ್ಲಿ ನಿದ್ದೆ ಮಾತ್ರೆ ನೀಡಿದ್ದಾನೆ. ಆಕೆ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಆದರೆ ನಿದ್ದೆಯ ಮಂಪರಿನಲ್ಲಿದ್ದ ಆಕೆ ಅತ್ಯಾಚಾರ ಪ್ರತಿಭಟಿಸಿದ್ದಾಳೆ. ಆಗ ಕೋಪದಲ್ಲಿ ಕಮಲೇಶ್ ಪಟೇಲ್ ಮಹಿಳೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ದೇಹವನ್ನು ಕತ್ತರಿಸಿದ್ದಾನೆ. ಸರಿಸುಮಾರು 4 ಗಂಟೆಗೂ ಹೆಚ್ಚು ಕಾಲ ಮಹಿಳೆಯ ದೇಹ ಕತ್ತರಿಸಿದ ಕಮಲೇಶ್ ಪಟೇಲ್‌, ಗೋಣಿ ಚೀಲದಲ್ಲಿ ಪ್ಯಾಕ್ ಮಾಡಿದ್ದಾನೆ. ಬಳಿಕ ರೈಲು ನಿಲ್ದಾಣಕ್ಕೆ ತೆರಳಿ ಎರಡು ರೈಲುಗಳಲ್ಲಿ ಆಕೆಯ ಮೃತದೇಹದ ತುಂಡುಗಳನ್ನು ಇಟ್ಟು ಪರಾರಿಯಾಗಿದ್ದಾನೆ.

ಇನ್ನು ಜೂನ್ 10 ರಂದು ಉತ್ತರಖಂಡ ರಿಷಿಕೇಶಿ ರೈಲು ನಿಲ್ದಾಣದಲ್ಲಿ ರೈಲಿನಲ್ಲಿ ಮಹಿಳೆಯ ಕೈ ಕಾಲುಗಳು ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿದಾಗ ಮಹಿಳೆಯ ದೇಹದ ಇತರ ಭಾಗಗಳು ಸಿಕ್ಕಿವೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು ರೈಲು ಹಾದು ಬಂದ ಎಲ್ಲಾ ನಿಲ್ದಾಣಗಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆರೋಪಿ ಪತ್ತೆ ಹಚ್ಚಿದ ಪೊಲೀಸರು ಕಮಲೇಶ್ ಪಟೇಲ್ ನನ್ನು ಬಂಧಿಸಿದ್ದಾರೆ.

Related Articles

Back to top button
error: Content is protected !!