ಇತರೆ

ರೀಲ್ಸ್ ಹುಚ್ಚಿನ ಪರಮಾವಧಿ, ಜೀವಕ್ಕೆ ಸಂಚಕಾರ ತಂದುಕೊಳ್ಳುವ ಕೆಟ್ಟ ಸ್ಟಂಟ್!

Views: 181

ಇದೀಗ ರೀಲ್ಸ್ ರಾಣಿ ಒಬ್ಬಳ ಭಯಾನಕ, ಆಘಾತಕಾರಿ, ಆತಂಕಕಾರಿ ಹಾಗೂ ಟೀಕೆಗೆ ಒಳಪಟ್ಟ ವಿಡಿಯೋ ಒಂದು ಬೆಚ್ಚಿಬೀಳಿಸ್ತಿದೆ.

ಪುಣೆಯಲ್ಲಿ ಕ್ಯಾಪ್ಚರ್ ಆಗಿರುವ ವಿಡಿಯೋ ಇದಾಗಿದೆ. ಗಗನಚುಂಬಿ ಕಟ್ಟಡಗಳು, ವಾಹನದಟ್ಟಣೆ ಹೊಂದಿರುವ ರಸ್ತೆ ಪಕ್ಕ ಒಂದರಲ್ಲಿ ಪಾಳು ಬಿದ್ದಂತೆ ಕಾಣುವ ಬಹುಮಹಡಿಯ ಕಟ್ಟಡವೊಂದು ಕಾಣುತ್ತಿದೆ. ಆ ಕಟ್ಟಡದ ಟೆರಸ್ ಮೇಲೆ ಓರ್ವ ಯುವತಿ ಸೇರಿ ಇಬ್ಬರು ಯುವಕರು ಕಾಣುತ್ತಿದ್ದಾರೆ.

ದುಸ್ಸಾಹಸ, ರೀಲ್ಸ್ ಹುಚ್ಚಿನ ಪರಮಾವಧಿ, ಜೀವಕ್ಕೆ ಸಂಚಕಾರ ತಂದ್ಕೊಳ್ಳುವ ಕೆಟ್ಟ ಸ್ಟಂಟ್ ಈ ಯುವಕರದ್ದಾಗಿದೆ. ಏಕಾಏಕಿ ವ್ಯಕ್ತಿಯೊಬ್ಬನ ಕೈ ಹಿಡಿದು ಕಟ್ಟಡದ ತುತ್ತ ತುದಿಯಿಂದ ನೇತಾಡಿದ್ದಾಳೆ. ಕ್ಯಾಮೆರಾಗೆ ಪೋಸ್ ನೀಡಿದ್ದಾಳೆ. ಈ ದೃಶ್ಯವು ನೋಡುಗರ ಎದೆ ದಸಕ್ ಅನ್ನೋ ರೀತಿಯಲ್ಲಿದ್ದು, ಕ್ರಮಕ್ಕಾಗಿ ಜನ ಆಗ್ರಹಿಸುತ್ತಿದ್ದಾರೆ. ಡಿಫ್ರೆಂಟ್ ಡಿಫ್ರೆಂಟ್ ಆ್ಯಂಗಲ್ನಲ್ಲಿ ಕ್ಯಾಮೆರಾ ಇಟ್ಟು ಶೂಟ್ ಮಾಡಿದ್ದಾರೆ.

100 ಫೀಟ್ ಎತ್ತರದಿಂದ ಬಿಲ್ಡಿಂಗ್ ನ ತುತ್ತ ತುದಿಯಿಂದ ಸ್ನೇಹಿತನ ಕೈಸಹಾಯದಿಂದ ಯಾವುದೇ ಗ್ರಿಪ್ ಇಲ್ಲದೇ ನೇತಾಡಿರುವ ದೃಶ್ಯ ಭಯಾನಕವಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಹಾಕಲು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

 

Related Articles

Back to top button
error: Content is protected !!