ಇತರೆ
ಗಂಗೊಳ್ಳಿ:ಹಲವರ ಮೇಲೆ ಜೇನುನೊಣಗಳ ದಾಳಿ; ವ್ಯಕ್ತಿ ಗಂಭೀರ

Views: 169
ಗಂಗೊಳ್ಳಿ :ಜೇನುನೊಣಗಳು ಹಲವರ ಮೇಲೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಗಂಗೊಳ್ಳಿ ವಾಟರ್ ಟ್ಯಾಂಕ್ ಮೇಲೆ ದೊಡ್ಡ ಜೇನುಗೂಡಿದ್ದು, ಗೂಡಿಗೆ ಪಕ್ಷಿ ದಾಳಿ ಮಾಡಿರಬಹುದು ಅಥವಾ ಗಾಳಿಯಿಂದ ಗೂಡಿಗೆ ತೊಂದರೆಯಾದ್ದರಿಂದ ಜೇನುನೊಣಗಳು ಒಮ್ಮೆಲೇ ಗೂಡಿನಿಂದ ಹೊರಬಂದು ಇಲ್ಲಿ ತಿರುಗಾಡುವ ಜನರ ಮೇಲೆ ದಾಳಿ ಮಾಡಿ ಸಿಕ್ಕ ಸಿಕ್ಕವರಿಗೆ ಕಚ್ಚಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಇಮ್ತಿಯಾಜ್ ಜೇನು ನೊಣಗಳ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡಿದ್ದು, ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಇವರ ದೇಹದಿಂದ ಚುಚ್ಚಿದ ಮುಳ್ಳುಗಳನ್ನು ತೆಗೆಯಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಎಂಟು ಹತ್ತು ಜನರ ಮೇಲೆ ಜೇನು ದಾಳಿ ಮಾಡಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಇಲ್ಲಿನ ಜನರು ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಂಡು ಈ ಮಾರ್ಗವಾಗಿ ಸಂಚರಿಸಿದಂತೆ ಕ್ರಮ ಕೈಗೊಂಡಿದ್ದಾರೆ.






