ಸಾಂಸ್ಕೃತಿಕ

ನಾಳೆಯಿಂದ ನವೆಂಬರ್‌ 5ರ ತನಕ ಮಂದಾರ್ತಿ ಮಳೆಗಾಲದ ಯಕ್ಷಗಾನ ಸೇವೆ ಆಟ ಆರಂಭ

Views: 37

ಬ್ರಹ್ಮಾವರ: ಮಂದಾರ್ತಿ ಯಕ್ಷಗಾನ ಮೇಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 7ನೇ ವರ್ಷದ ಮಳೆಗಾಲದ ಸೇವೆ ಆಟ ಜೂ. 18ರಿಂದ ಜರಗಲಿದೆ ನವೆಂಬರ್ 5 ರ ತನಕ ನಡೆಯಲಿದೆ.

ಬೆಳಿಗ್ಗೆ ಬಾರಾಳಿ ಶ್ರೀ ಗಣಪತಿ ದೇವಾಲಯದಲ್ಲಿ ಗಣಹೋಮ ನಡೆಸಿ ಅನಂತರ ಶ್ರೀ ದುರ್ಗಾಪರಮೇಶ್ವರರೀ ದೇಗುಲದಲ್ಲಿ ಗಣಹೋಮ, ಮಹಾಪೂಜೆ ಅನಂತರ ತಾಳ, ಗೆಜ್ಜೆ ನೀಡಿ ಸೇವೆಯಾಟಕ್ಕೆ ಚಾಲನೆ ನೀಡಲಾಗುವುದು.

ದೇಗುಲದ ದುರ್ಗಾಪರಮೇಶ್ವರರೀ ಕಲ್ಯಾಣ ಮಂದಿರದಲ್ಲಿ ದಿನಂಪ್ರತಿ ಸಂಜೆ 7ರಿಂದ ರಾತ್ರಿ 1ರ ತನಕ ಕಾಲಮಿತಿ ಪ್ರದರ್ಶನ ನಡೆಯಲಿದೆ.

ನವೆಂಬರ್‌ 5ರ ತನಕ ಸೇವೆ ಆಟ ನಡೆಯಲಿದ್ದು, ಸುಮಾರು 145 ದಿನಗಳ ಕಾಲ ದಿನಕ್ಕೆ ಎರಡು ಸೇವೆಯಾಟದಂತೆ ಒಟ್ಟು 290 ಸೇವೆ ಪೂರ್ಣಗೊಳ್ಳಲಿದೆ ಎಂದು ಅಧ್ಯಕ್ಷ ಎಚ್‌. ಧನಂಜಯ ಶೆಟ್ಟಿ ಅವರು ತಿಳಿಸಿದ್ದಾರೆ.

Related Articles

Back to top button
error: Content is protected !!