ಸಾಂಸ್ಕೃತಿಕ

ರೇಣುಕಾಸ್ವಾಮಿ‌ ಹತ್ಯೆ ಬೆನ್ನಲ್ಲೇ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್ ಪ್ರಕರಣ ಇದೀಗ ಮುನ್ನೆಲೆಗೆ

Views: 141

ರೇಣುಕಾಸ್ವಾಮಿ‌ ಮರ್ಡರ್ ಬೆನ್ನಲ್ಲೇ ದರ್ಶನ್ ಹಳೇ ಮ್ಯಾನೇಜರ್ ಮಿಸ್ಸಿಂಗ್ ಪ್ರಕರಣ ಮುನ್ನೆಲೆಗೆ ಬಂದಿದೆ. ಹಣ ವಂಚನೆ ಮಾಡಿ ಎಸ್ಕೇಪ್ ಆಗಿದ್ದ ದರ್ಶನ್ ಮ್ಯಾನೇಜರ್ ನಿಜಕ್ಕೂ ಕಾಣೆಯಾದ್ರಾ? ಅಥವಾ ರೇಣುಕಾಸ್ವಾಮಿ ಥರಾ ಯಾವುದಾರೂ ಮೋರಿ ಪಾಲಾಗಿದ್ದಾರಾ ಅನ್ನೋ ಪ್ರಶ್ನೆ ಉದ್ಭವವಾಗಿದ್ದು, ಡಿ ಗ್ಯಾಂಗ್ ಮೇಲೆ ಅನುಮಾನ ಕಾಡಿದೆ.

ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸ್ ಕಸ್ಟಡಿಯಲ್ಲಿ ಸದ್ಯ ವಿಚಾರಣೆ ಎದುರಿಸುತ್ತಿದ್ದಾರೆ. ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ದರ್ಶನ್ ಮತ್ತು ಆತನ ಗ್ಯಾಂಗ್ ಭೀಕರವಾಗಿ ಕೊಲೆ ಮಾಡಿದೆ. ಇದೀಗ ಈ ಪ್ರಕರಣದ ನಡುವೆಯೇ ಡಿ-ಗ್ಯಾಂಗ್ ಮೇಲೆ ಮತ್ತೊಂದು ಅನುಮಾನ ಮೂಡಿದೆ.

ನಾಪತ್ತೆ ಆಗಿರುವ ಮಲ್ಲಿಕಾರ್ಜುನ್, ನಟ ದರ್ಶನ್ ಅವರ ಮಾಜಿ ಮ್ಯಾನೇಜರ್. 2011ರಿಂದ 2018ರವರೆಗೆ ದರ್ಶನ್ ಬಳಿ ಮ್ಯಾನೇಜರ್ ಆಗಿದ್ದರು. ದರ್ಶನ್ ಅವರ ಕಾಲ್ಶೀಟ್ ಸೇರಿದಂತೆ ಹಣದ ವ್ಯವಹಾರ ನೋಡಿಕೊಳ್ತಿದ್ದ. ‘ಪ್ರೇಮಬರಹ’ ಚಿತ್ರದ ವಿತರಣೆ ವಿಚಾರದಲ್ಲಿ ಮಲ್ಲಿಕಾರ್ಜುನ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. 1 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ನಟ ಅರ್ಜುನ್ ಸರ್ಜಾ ದೂರು ನೀಡಿದ್ದರು. ಈ ವಿಷ್ಯ ಗೊತ್ತಾಗಿ ಮಲ್ಲಿಕಾರ್ಜುನ್ಗೆ ದರ್ಶನ್ ಕ್ಲಾಸ್ ತೆಗೆದುಕೊಂಡಿದ್ರು. ಇನ್ನು ನಟ ದರ್ಶನ್ಗೂ ಮಲ್ಲಿಕಾರ್ಜುನ್ 2 ಕೋಟಿ ವಂಚನೆ ಮಾಡಿರುವ ಆರೋಪ ಇದೆ. ಇದೆಲ್ಲ ಕಾರಣದಿಂದ ಮಾನ್ಯೇಜರ್ ಆಗಿದ್ದ ಮಲ್ಲಿಕಾರ್ಜುನ್ನನ್ನು ನಟ ದರ್ಶನ್ ಸ್ವಲ್ಪ ದೂರವಿಟ್ಟಿದ್ದರಂತೆ.

ಇನ್ನು ಗದಗದಲ್ಲಿದ್ದ ಮಲ್ಲಿಕಾರ್ಜುನ್ ಮನೆಯವರೆಗೂ ಈ ಬಗ್ಗೆ ಗೊತ್ತಿಲ್ಲವಂತೆ. ಮಲ್ಲಿಕಾರ್ಜುನ್ ಅವರನ್ನ ಹುಡುಕಿ ಅರ್ಜುನ್ ಸರ್ಜಾ ಮ್ಯಾನೇಜರ್ ಊರಿಗೆ ಹೋಗಿದ್ದರು. ಆಗ ಅವರ ಪತ್ನಿ ಮಾತಾಡಿ ಹೀಗೆ ಒಂದು ದಿನ ಮನೆಗೆ ಬಂದು, ನಾನು ಸಾಲ ಮಾಡಿಕೊಂಡಿದ್ದೇನೆ, ಯಾರಿಗೂ ಮುಖ ತೋರಿಸಲು ಆಗಲ್ಲ. ಸಾಲ ತೀರಿಸಿ ಬರುತ್ತೇನೆ, ಯಾರೂ ನನ್ನನ್ನು ಹುಡುಕಬೇಡಿ” ಅಂತ ಪತ್ರ ಬರೆದಿಟ್ಟು ಹೋದರು ಅಂತ ಹೇಳಿದ್ದರಂತೆ. ಹೀಗಾಗಿ ಅರ್ಜುನ್ ಸರ್ಜಾ ದೂರು ನೀಡಿದ್ದರು. ಕಳೆದ ಮೇ ತಿಂಗಳಲ್ಲಿ ಕೋರ್ಟ್ ಮಲ್ಲಿಕಾರ್ಜುನ ಬಗ್ಗೆ ಪತ್ರಿಕಾ ಪ್ರಕಟಣೆಯೂ ಹೊರಡಿಸಿತ್ತು. ಆದರೂ ಕಳೆದ ಆರು ವರ್ಷಗಳಿಂದ ಮಲ್ಲಿಕಾರ್ಜುನ್ ಬಗ್ಗೆ ಯಾವ ಸುಳಿವು ಸಿಕ್ಕಿಲ್ಲ.

 

Related Articles

Back to top button
error: Content is protected !!