ಸಾಂಸ್ಕೃತಿಕ

ಯುವ ರಾಜ್ ಕುಮಾರ್ ಪತ್ನಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಕಾಂತಾರ ಬೆಡಗಿ ಸಪ್ತಮಿ ಗೌಡ

Views: 971

ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ, ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ನೀಡುವಂತೆ ನಟಿ ಸಪ್ತಮಿ ಗೌಡ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದಾರೆ.

ಶ್ರೀದೇವಿ ಪತಿ ಯುವ ರಾಜ್ ಕುಮಾರ್ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿದ್ದರು. ಅಲ್ಲದೆ, ಸಪ್ತಮಿ ಗೌಡ ಹೆಸರನ್ನು ಸಹ ಪ್ರಕರಣದಲ್ಲಿ ಎಳೆದು ತಂದಿದ್ದರು. ಸಪ್ತಮಿ ಗೌಡ ಹಾಗೂ ಯುವರಾಜ್ ಪರಸ್ಪರ ಸಂಬಂಧದಲ್ಲಿದ್ದಾರೆ. ತಾವು ಅಮೆರಿಕಕ್ಕೆ ತೆರಳಿದಾಗ ಯುವ ಹಾಗೂ ಸಪ್ತಮಿ ಸಜೀವನ ನಡೆಸಿದ್ದಾರೆ ಎಂದು ಶ್ರೀದೇವಿ ಭೈರಪ್ಪ ಆರೋಪ ಮಾಡಿದ್ದರು. ಸಪ್ತಮಿ ಗೌಡ ಅವರಿಗಾಗಿ ನನ್ನನ್ನು ಮನೆಯಿಂದ ಹೊರಗೆ ಹಾಕುವ ಪ್ರಯತ್ನವೂ ನಡೆದಿತ್ತು ಎಂದು ಸಹ ಶ್ರೀದೇವಿ ತಮ್ಮ ವಕೀಲರ ಮೂಲಕ ಆರೋಪ ಮಾಡಿದ್ದರು.

ನಟಿ ಸಪ್ತಮಿ ಗೌಡ, ಶ್ರೀದೇವಿ ಭೈರಪ್ಪ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಶ್ರೀದೇವಿ ಭೈರಪ್ಪ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಸಪ್ತಮಿ ಗೌಡ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ತಮ್ಮ ವಿರುದ್ಧ ಶ್ರೀದೇವಿ, ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಸಪ್ತಮಿ ಆರೋಪ ಮಾಡಿದ್ದಾರೆ,

ಅಂತೆಯೇ ನಿರ್ಭಂದಕಾಜ್ಞೆ ಆದೇಶಿಸಿರುವ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ, ಶ್ರೀದೇವಿ ಭೈರಪ್ಪ ಅವರಿಗೆ ನೊಟೀಸ್ ಜಾರಿ ಮಾಡುವಂತೆ ಆದೇಶ ಮಾಡಿದೆ. ಆದರೆ ಶ್ರೀದೇವಿ ಭೈರಪ್ಪ ಪ್ರಸ್ತುತ ವಿದೇಶದಲ್ಲಿದ್ದಾರೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಪ್ರಸ್ತುತ ಯುವರಾಜ್ ಕುಮಾರ್ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ತಿಳಿದು ಬರಲಿದೆ.

Related Articles

Back to top button
error: Content is protected !!