ಸಾಂಸ್ಕೃತಿಕ

ದರ್ಶನ್ ವಿರುದ್ಧ ಸ್ಟೇಟಸ್ ಹಾಕಿಕೊಂಡಿದ್ದ ಪಂಚರ್ ಅಂಗಡಿ ಯುವಕನಿಗೆ ಬೆಂಕಿ ಹಾಕ್ತೀವಿ ಎಂದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಅರೆಸ್ಟ್ 

Views: 83

ಯಾದಗಿರಿ: ದರ್ಶನ್ ಅಭಿಮಾನಿಯೋರ್ವ ದರ್ಶನ್ ವಿರುದ್ಧ ಸ್ಟೇಟಸ್ ಹಾಕಿಕೊಂಡ ಯುವಕನಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ರಾಜು ಎಂಬಾತ ಪಂಚರ್ ಅಂಗಡಿ ಇಟ್ಟುಕೊಂಡಿದ್ದ ಅಭಿ ಎಂಬ ಯುವಕನಿಗೆ ಜೀವ ಬೆದರಿಕೆ ಹಾಕಿದ್ದಾನೆ.

ಅಭಿ ತನ್ನ ಸ್ಟೇಟಸ್ನಲ್ಲಿ ಬಾಸ್ ಬಾಸ್ ಎಂದು ಯಾಕೆ ಇಡ್ತೀರಿ?. ಬಕೆಟ್ ಯಾಕ್ ಹಿಡಿತೀರಿ. ತಾಯಿ-ತಂದೆಗೆ ಬಕೆಟ್ ಹಿಡಿಯಿರಿ ಎಂದು ಸ್ಟೇಟಸ್ ಹಾಕಿಕೊಂಡಿದ್ದನು. ಇದನ್ನು ಕಂಡು ದರ್ಶನ್ ಅಭಿಮಾನಿ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ರಾಜು ಎಂಬವನು ಅಭಿಗೆ ದೂರವಾಣಿ ಕರೆ ಮಾಡಿದ್ದಾನೆ. ನಿನ್ನನ್ನು ಜೀವಂತ ಸುಡೋದಾಗಿ ಬೆದರಿಕೆ ಹಾಕಿದ್ದಾನೆ.

ನಿನ್ನ ಮನೆ ಹಾಗೂ ಅಂಗಡಿಗೆ ಬೆಂಕಿ ಹಚ್ಚಬೇಕಾಗುತ್ತೆ. ಬಾಸ್ ಅಂದ್ರೂ ಅಷ್ಟೇ, ಡಿ ಬಾಸ್ ಅಂದ್ರೂ ಅಷ್ಟೇ. ಬಾಸ್ ಬಗ್ಗೆ ಮಾತಾಡಿದ್ರೆ ಖಾಲಿಯಾಗ್ತಿಯಾ ನೀನು. ಅಂಗಡಿ ಸಮೇತ ಬೆಂಕಿ ಹಚ್ಚುತ್ತಾರೆ. ಕೂಡಲೇ ಕ್ಷಮೆ ಕೇಳಿ ವಿಡಿಯೋ ಮಾಡಿ ಹಾಕು. ಹಾಕಿರೋ ವಿಡಿಯೋ ಡಿಲೀಟ್ ಮಾಡು ಎಂದು ಅಭಿಗೆ ದರ್ಶನ್ ಅಭಿಮಾನಿ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಬೆದರಿಕೆ ಹಾಕಿದ್ದಾನೆ.

ಅಭಿಗೆ ಬೆದರಿಕೆ ಹಾಕಿದ ಆಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಯಾದಗಿರಿ ನಗರ ಠಾಣೆ ಪೊಲೀಸರು ದರ್ಶನ್ ಅಭಿಮಾನಿ ರಾಜುನನ್ನು ಬಂಧಿಸಿದ್ದಾರೆ.

Related Articles

Back to top button
error: Content is protected !!