ಸಾಂಸ್ಕೃತಿಕ

ದರ್ಶನ್‌ಗೆ ಸಹಾಯ ಮಾಡಿದ್ದ ಮತ್ತಿಬ್ಬರು ಆರೋಪಿಗಳು ಅರೆಸ್ಟ್!

Views: 80

ಚಿತ್ರದುರ್ಗ: ರೇಣುಕಾಸ್ವಾಮಿಯನ್ನು ಕ್ರೂರವಾಗಿ ಕೊಂದ ಕೇಸಿನಲ್ಲಿ  ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಪೊಲೀಸರು ಕೆದಕಿದಷ್ಟು ಮಾಹಿತಿ ಸಂಗ್ರಹವಾಗುತ್ತಿದೆ. ಇದರ ಬೆನ್ನಲ್ಲೇ ಮತ್ತಿಬ್ಬರು ಆರೋಪಿಗಳನ್ನು ಚಿತ್ರದುರ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳಾದ ಜಗ್ಗು, ಅನು ಎಂಬುವರು ಚಿತ್ರದುರ್ಗದ ಡಿವೈಎಸ್ಪಿ ಕಚೇರಿಗೆ ತಾವೇ ಬಂದು ಸೆರೆಂಡರ್ ಆಗಿದ್ದಾರೆ. ಇವರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ರೇಣುಕಾಸ್ವಾಮಿ ಕೊಲೆ ನಡೆದ ಮೇಲೆ ಆರೋಪಿಗಳಾದ ಜಗ್ಗು, ಅನು ತಲೆಮರೆಸಿಕೊಂಡಿದ್ದರು. ಹೀಗಾಗಿ ಪೊಲೀಸರು ಹುಡುಕಾಟದಲ್ಲಿ ಇರುವಾಗಲೇ ತಾವೇ ಪೊಲೀಸ್ ಕಚೇರಿಗೆ ಬಂದು ಶರಣಾಗಿದ್ದಾರೆ.

ಇನ್ನು ಈ ಕೊಲೆ ಕೇಸ್ನಲ್ಲಿ ಜಗ್ಗು ಎ6 ಆರೋಪಿಯಾದರೆ, ಅನು ಅನ್ನುವನು ಎ7 ಆರೋಪಿಯಾಗಿದ್ದಾನೆ. ಈ ಇಬ್ಬರು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದವರು ಆಗಿದ್ದಾರೆ. ಅದರಂತೆ ಪವಿತ್ರಾಗೌಡ ಎ1, ನಟ ದರ್ಶನ್ ಎ2 ಆರೋಪಿಯಾಗಿದ್ದಾರೆ.

Related Articles

Back to top button
error: Content is protected !!