ಸಾಂಸ್ಕೃತಿಕ

ದರ್ಶನ್, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಂತರ ಕಾಯ್ದುಕೊಂಡರೆ!?

Views: 108

ಬೆಂಗಳೂರು:  ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎ1 ಆರೋಪಿಯಾಗಿ ಪವಿತ್ರಾ ಗೌಡರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇಂದೊಂದು ಪ್ರಕರಣದಿಂದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ತುಂಬಾ ಬೇಸರವಾಗಿದ್ದರು.ಈ ಕಾರಣಕ್ಕೆ ವಿಜಯಲಕ್ಷ್ಮಿ ಅಂತರ ಕಾಯ್ದುಕೊಂಡರೆ ಎಂಬ ಪ್ರಶ್ನೆ ಮೂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರರಕಣದಲ್ಲಿ ಪವಿತ್ರಾ ಗೌಡ, ದರ್ಶನ್ ಹೆಸರು ಕೇಳಿ ಬರುತ್ತಿದ್ದಂತೆ ನಿನ್ನೆ ಇನ್ಸ್ಟಾದಲ್ಲಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಅನ್ಫಾಲೋ ಮಾಡಿದ್ದರು. ಅಲ್ಲದೇ ದರ್ಶನ್ ಫ್ಯಾನ್ ಪೇಜ್ ಅನ್ನು ಅನ್ಫಾಲೋ ಮಾಡಿ ಇನ್ಸ್ಟಾಗೆ ಇದ್ದ ಡಿಪಿ ಫೋಟೋವನ್ನು ತೆಗೆದು ಹಾಕಿದ್ದರು. ಇದರಿಂದ ಇನ್ಸ್ಟಾ ಖಾತೆಯ ಡಿಪಿ ಬ್ಲಾಂಕ್ನಲ್ಲಿತ್ತು. ಸದ್ಯ ಈ ಎಲ್ಲದರ ಬೆನ್ನಲ್ಲೇ ಇದೀಗ ತಮ್ಮ ಇನ್ಸ್ಟಾ ಖಾತೆಯನ್ನು ವಿಜಯಲಕ್ಷ್ಮಿ ಅವರು ಡಿ-ಆ್ಯಕ್ಟಿವೇಟ್ ಮಾಡಿದ್ದಾರೆ.

ವಿಜಯಲಕ್ಷ್ಮಿ ಅವರು ಹೀಗೆ ಮಾಡಿರುವುದರಿಂದ ತಾವು ದರ್ಶನ್ ವಿಚಾರದಲ್ಲಿ ಸಖತ್ ಬೇಜಾರ್ ಆಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಕೊಲೆ ಕೇಸ್ನಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಅವರಿಂದ ವಿಜಯಲಕ್ಷ್ಮಿ ಅಂತರ ಕಾಯ್ದುಕೊಂಡರೆ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ ರೇಣುಕಾಸ್ವಾಮಿ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಕೆದಕಿದಷ್ಟು ಮಾಹಿತಿ ಪೊಲೀಸರಿಗೆ ಲಭ್ಯವಾಗುತ್ತಿದೆ.

Related Articles

Back to top button
error: Content is protected !!