ಸಾಂಸ್ಕೃತಿಕ

ರೇಣುಕಾಸ್ವಾಮಿ ಕೊಲೆಗೆ ಮೂರು ತಂಡಗಳು ಭಾಗಿಯಾದರೂ ದರ್ಶನ್ ಮತ್ತು ತಂಡ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದೇ ಬಲು ರೋಚಕ !!

Views: 160

ರೇಣುಕಾಸ್ವಾಮಿಯ ಮರ್ಡರ್ ಕೇಸಿನಲ್ಲಿ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಪೊಲೀಸರ ತನಿಖೆ ವೇಳೆ ರೇಣುಕಾಸ್ವಾಮಿಯ ಕೊಲೆಯಲ್ಲಿ ಮೂರು ತಂಡಗಳು ಭಾಗಿಯಾಗಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಅದರಲ್ಲಿ ಒಂದು ಕಿಡ್ನ್ಯಾಪ್ ತಂಡ ಮತ್ತೊಂದು ಹಲ್ಲೆ ನಡೆಸಿ ಕೊಂದ ತಂಡ. ಇನ್ನೊಂದು ಮೃತದೇಹವನ್ನು ವಿಲೇವಾರಿ ಮಾಡಿ, ಪೊಲೀಸರಿಗೆ ಶರಣಾದ ತಂಡ. ಈ ಮೂರು ತಂಡಗಳು ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದೇ ಬಲು ರೋಚಕವಾಗಿದೆ.

ನಟ ದರ್ಶನ್ ಅಣತಿಯಂತೆ ರಾಘವೇಂದ್ರ ಮತ್ತು ತಂಡ  ಚಿತ್ರದುರ್ಗದಲ್ಲಿ ಜೂನ್ 8 ರಂದು ಬೆಳಗ್ಗೆ 11 ಗಂಟೆಗೆ ರೇಣುಕಾಸ್ವಾಮಿಯನ್ನು ಎತ್ತಾಕಿಕೊಂಡು ಬಂದಿತ್ತು. ಬಳಿಕ ಆರ್.ಅರ್ ನಗರದ ಪಟ್ಟಣಗೆರೆಯ ಶೆಡ್ ಬಳಿಗೆ ರಾಘವೇಂದ್ರ ಅಂಡ್ ಟೀಂ ಕರೆ ತಂದಿದ್ದಾರೆ. ಅಷ್ಟೊತ್ತಿಗಾಗಲೇ ಶೆಡ್ ಬಳಿ ಕಾಯ್ತಿದ್ದ ವಿನಯ್, ಕಾರ್ತಿಕ್, ಪ್ರದೋಶ್, ನಿಖಿಲ್, ಕೇಶವಮೂರ್ತಿ, ದೀಪಕ್ ನಂದೀಶ್ ನಾಗರಾಜ್ ತಂಡ ರೇಣುಕಾಸ್ವಾಮಿ ಬರ್ತಿದ್ದಂತೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

ಜೂನ್ 8ರ ಸಂಜೆ ಹೊತ್ತಿಗೆ ಪವಿತ್ರಾ ಗೌಡ ಜೊತೆ ಶೆಡ್ ಬಳಿ ಹೋದ ದರ್ಶನ್ ಕೂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ, ಬಳಿಕ ದರ್ಶನ್ ಮತ್ತು ಪವಿತ್ರಾ ವಾಪಸ್ ತೆರಳಿದ್ದಾರೆ. ದರ್ಶನ್ ಶೆಡ್ ನಿಂದ ತೆರಳುವ ವೇಳೆಗೆ ಅರೆಜೀವವಾಗಿದ್ದ ರೇಣುಕಾಸ್ವಾಮಿ, ಸಂಜೆ 6 ಗಂಟೆ ಸುಮಾರಿಗೆ ಮೃತ ಪಟ್ಟಿರೋದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಮೂರು ತಂಡಗಳು ರಾತ್ರಿಯೆಲ್ಲ ದರ್ಶನ್ ಜೊತೆ ವಾಟ್ಸಾಪ್ ಕಾಲ್ ಮಾಡಿದ್ದ ಮಾಹಿತಿ ತನಿಖೆ ವೇಳೆ ತಿಳಿದು ಬಂದಿದೆ. ಇನ್ನು, ರೇಣುಕಾಸ್ವಾಮಿ ಮೃತಪಟ್ಟಿರುವ ವಿಷಯ ಕಿವಿಗೆ ಬೀಳ್ತಿದ್ದಂತೆ, ದರ್ಶನ್ ತಮ್ಮ ಸಹಚರರ ಮೇಲೆ ಕೆಂಡಾಮಂಡಲ ಆಗಿದ್ರಂತೆ. ಅವರಿಗೆಲ್ಲ ದರ್ಶನ್ ಬೈದಿದ್ದಾರೆ. ಬಳಿಕ ಈ ಕೇಸಿನಿಂದ ಹೊರ ಬರಲು ಪ್ರಕರಣವನ್ನು ಬೇರೆಯವರ ತಲೆಗೆ ಕಟ್ಟಲು ಪ್ಲಾನ್ ಮಾಡಿದ್ದಾರೆ. ಈ ವೇಳೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರ ಸಲಹೆ ಪಡೆದು, ರೇಣುಕಾಸ್ವಾಮಿಯ ಮೃತದೇಹವನ್ನು ಆರ್.ಆರ್ ನಗರದಿಂದ ಸುಮನಹಳ್ಳಿ ಬ್ರಿಡ್ಜ್ ಬಳಿಯ ರಾಜಕಾಲುವೆ ಬಳಿ ತಂದು ಎಸೆದು ಎಸ್ಕೇಪ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಭಾಗಿಯಾಗಿರೋ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತಷ್ಟು ಸಾಕ್ಷಿಗಳು ಸಿಕ್ಕಿವೆ.

ರೇಣುಕಾಸ್ವಾಮಿ ಕೊಲೆ ಕೇಸ್ ಅನ್ನು ಬೇರೆಯವರ ತಲೆಗೆ ಕಟ್ಟಲು ಮುಂದಾಗಿದ್ದ ದರ್ಶನ್ ಅದರಂತೆ, ಪ್ರದೂಶ್ಗೆ ಡೀಲ್ ಕೊಟ್ಟಿದ್ರಂತೆ. ಬಳಿಕ ಪ್ರದೂಶ್ ಗಿರಿನಗರದ ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಎಂಬುವರಿಗೆ ಮೃತದೇಹ ವಿಲೇವಾರಿ ಮಾಡಿ, ಪೊಲೀಸರ ಮುಂದೆ ಸರೆಂಡರ್ ಆಗಲು 30 ಲಕ್ಷಕ್ಕೆ ಡೀಲ್ ಮಾಡಿದ್ದಾನೆ. ಜೊತೆಗೆ ಕೋರ್ಟ್ ಖರ್ಚು, ಬೇಲ್ ಖರ್ಚು ಎಲ್ಲವನ್ನೂ ನೋಡಿಕೊಳ್ಳೇದಾಗಿ ಹೇಳಿ ಒಪ್ಪಿಸಿದ್ದಾನೆ.

ಅದರಂತೆ ಹಣ ತೋರಿಸಿದ ಬಳಿಕ ಆರೋಪಿಗಳು, ರೇಣುಕಾಸ್ವಾಮಿ ಮೃತದೇಹವನ್ನು ರಾಜಕಾಲುವೆ ಬಳಿ ಎಸೆದು, ಗಿರಿನಗರ ಪೊಲೀಸರಿಗೆ ಶರಣಾಗಿದ್ದಾರೆ. ಆದ್ರೆ, ವಿಚಾರಣೆ ವೇಳೆ ಒಬ್ಬೊಬ್ಬ ಆರೋಪಿ ಒಂದೊಂದು ಹೇಳಿಕೆ ನಿಡಿದ್ದಾರೆ. ಅನುಮಾನದ ಮೇರೆಗೆ ಮೂವರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಹಿರಂಗವಾಗಿದೆ. ಕೊಲೆ ಕೇಸಿನಲ್ಲಿ ಲಾಕ್ ಆಗಿರುವ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

 

Related Articles

Back to top button
error: Content is protected !!