ಇತರೆ

ಮಗನನ್ನು ಹೇಗೆ ಕೊಂದಿದ್ದಾರೋ ಹಾಗೇ ಅವರನ್ನು ಕೊಲ್ಲಿ, ಸುಮ್ಮನೆ ಬಿಡಬಾರದು ಎಂದು ಬಿಕ್ಕಿ ಬಿಕ್ಕಿ ಅತ್ತ ತಾಯಿ!

Views: 147

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಒಟ್ಟು 13 ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಮಗ ರೇಣುಕಾಸ್ವಾಮಿಯನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವಿಚಾರವಾಗಿ ಮಾತಾಡಿದ ಪೋಷಕರು ಮಗನ ಸಾವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಈ ಸಂಬಂಧ ಮಾತಾಡಿದ ಮೃತ ರೇಣುಕಾಸ್ವಾಮಿ ಪೋಷಕರು, ನನ್ನ ಮಗನನ್ನು ಸಾಯಿಸಿದ ಹಾಗೇ ದರ್ಶನ್ ನನ್ನು ಸಾಯಿಸಿ. ನನ್ನ ಮಗನ ಮುಖಕ್ಕೆ, ಎದೆಗೆ, ಕೈಗೆ ಮರ್ಮಾಂಗಕ್ಕೆ ಹೊಡೆದಿದ್ದಾರೆ.ದೇಹಕ್ಕೆ ಸಿಗರೇಟಿನಿಂದ ಸುಟ್ಟು ಕ್ರೌರ್ಯ ಮೆರೆದು ಮನಸ್ಸೋ ಇಚ್ಚೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ನನ್ನ ಮಗನನ್ನು ಹೇಗೆ ಸಾಯಿಸಿದ್ದಾರೆ ಅವರನ್ನು ಹಾಗೇ ಸಾಯಿಸಿಬೇಕು. ಆಫೀಸ್ ಗೆ ಹೋದವನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಅವರನ್ನು ಸುಮ್ಮನೆ ಬಿಡಬಾರದು. ನನ್ನ ಸೊಸೆ ಗಂಡ ಬರುತ್ತಾನೆ ಅಂತ ಕಾಯುತ್ತಾ ಕುಳಿತ್ತಿದ್ದಳು. ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗಲೇಬೇಕು. ಹೋದ ಮಗ ವಾಪಸ್ ಬರ್ತಾನಾ? ಏನ್ ಮಾತನಾಡಿದ್ರೂ ನನ್ನ ಮಗ ಬಾರ್ತಾನಾ ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇಂದು ಚಿತ್ರದುರ್ಗದಲ್ಲಿ ಅಮಾನುಷ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

ರೇಣುಕಾಸ್ವಾಮಿ ಅಮಾನುಷ ಹತ್ಯೆಯನ್ನು ಖಂಡಿಸಿ ಇಂದು ಚಿತ್ರದುರ್ಗದ ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಜೊತೆಗೆ ಇನ್ನೂ ಕೆಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಚಿತ್ರದುರ್ಗದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ನಡೆಯಲಿದ್ದು, ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದಾರೆ.

ರೇಣುಕಾ ಸ್ವಾಮಿಯ ಪತ್ನಿ ಈಗ ಐದು ತಿಂಗಳ ಗರ್ಭಿಣಿ. ಮನೆಯಲ್ಲಿ  ತಂದೆ, ತಾಯಿ ವಯಸ್ಸಾದ ಇಬ್ಬರು ಅಜ್ಜಿಯರಿದ್ದಾರೆ. ಸದ್ಯ ಮಗನನ್ನು ಕಳೆದುಕೊಂಡ ದುಃಖದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Related Articles

Back to top button
error: Content is protected !!