ಚಂದನ್-ನಿವೇದಿತಾಗೆ ವಿಚ್ಛೇದನಕ್ಕೆ ಈ ಕಾರಣ? ನ್ಯಾಯಾಧೀಶರ ಮುಂದೆ ಇಬ್ಬರೂ ಹೇಳಿದ್ದು ಏನು?

Views: 373
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಂಪತಿ ದೂರಾಗುತ್ತಿದ್ದಾರೆ. ಇಬ್ಬರೂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಚರ್ಚೆಯ ನಡುವೆ ಇಬ್ಬರಿಗೂ ಇದೀಗ ವಿಚ್ಛೇದನ ಮಂಜೂರು ಆಗಿರುವ ಸುದ್ದಿ ಬಂದಿದೆ. ಬಹಳ ಹಿಂದೆಯೇ ಇಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಆಗಲೇ ಅರ್ಜಿ ಸಲ್ಲಿಸಿದ್ದು ಇದೀಗ ವಿಚಾರಣೆ ನಡೆದು ವಿಚ್ಛೇದನ ಅಧಿಕೃತವಾಗಿದೆ.

ಪರಸ್ಪರ ಪ್ರೀತಿಸಿ ಮದುವೆ ಆಗಿದ್ದ ಚಂದನ್- ನಿವೇದಿತಾ ದೂರಾಗಿರುವ ವಿಚಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ‘ಕೋಟಿ’ ಸಿನಿಮಾ ಪ್ರಮೋಷನ್ ವಿಡಿಯೋದಲ್ಲಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇನ್ನು 20 ದಿನಗಳ ಹಿಂದೆ ನಿವೇದಿತಾ ಹುಟ್ಟುಹಬ್ಬಕ್ಕೆ ಹ್ಯಾಪಿ ಬರ್ತ್‌ಡೇ ಲವ್ ಎಂದು ಬರೆದು ಚಂದನ್ ಶೆಟ್ಟಿ ಪೋಸ್ಟ್ ಮಾಡಿದ್ದರು. ವಿಚ್ಛೇದನ ವಿಚಾರವನ್ನು ರಹಸ್ಯವಾಗಿ ಕಾಪಾಡಿಕೊಂಡಿದ್ದ ಜೋಡಿ ಇದೀಗ ದೂರಾಗಿದ್ದಾರೆ.

ಸಂಧಾನ ಫಲಪ್ರದವಾಗದ ಕಾರಣ ಅಂತಿಮವಾಗಿ ಬೆಂಗಳೂರು ಕೌಂಟುಂಬಿಕ ನ್ಯಾಯಾಲಯ ಚಂದನ್- ನಿವೇದಿತಾಗೆ ವಿಚ್ಛೇದನಕ್ಕೆ ಅಸ್ತು ಎಂದಿದೆ. ಕೇಸ್ ನಂಬರ್-Mc 3388-/2024, 13b ಫ್ಯಾಮಿಲಿ ಕೋರ್ಟ್ ಆಕ್ಟ್ ಅಡಿ ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ. ನ್ಯಾಯಾಧೀಶರ ಮುಂದೆ ಇಬ್ಬರೂ “ಪರಸ್ಪರ ದೂರಾಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಕಾರಣ ಕೇಳಿದಾಗ ಸ್ವಲ್ಪ ಭಿನ್ನಾಭಿಪ್ರಾಯ ಇದೆ, ಇಬ್ಬರಿಗೂ ಕರಿಯರ್ ಬಗ್ಗೆ ಕನಸುಗಳು ಇವೆ, ಹೀಗಾಗಿ ಖುಷಿಯಾಗಿಯೇ ಒಪ್ಪಿದ್ದೇವೆ” ಎಂದಿದ್ದಾರೆ.

ಇನ್ನು ಚಂದನ್ ಶೆಟ್ಟಿ ಮಗು ಪಡೆಯುವ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದರು. ಆದರೆ ನಿವೇದಿತಾಗೆ ತಾಯಿ ಆಗುವ ಆಸಿ ಇರಲಿಲ್ಲ. ಬಣ್ಣದಲೋಕದಲ್ಲಿ ಸಾಧಿಸುವ ಆಸಕ್ತಿ ಇತ್ತು. ಮಗು ಮಾಡಿಕೊಳ್ಳುವ ವಿಚಾರಕ್ಕೆ ಇಬ್ಬರೂ ಚರ್ಚೆ ನಡೆಸಿದ್ದರು. ಆದರೆ ಮಗು ಮಾಡಿಕೊಂಡರೆ ಕರಿಯರ್ ಕಟ್ಟಿಕೊಳ್ಳೋದು ಕಷ್ಟ ಎನ್ನುವ ಕಾರಣಕ್ಕೆ ಡಿವೋರ್ಸ್ ನಿರ್ಧಾರಕ್ಕೆ ಬಂದರು ಎನ್ನಲಾಗ್ತಿದೆ. ಇನ್ನು ಆಕೆಗೆ ಇತ್ತೀಚೆಗೆ ಹೆಚ್ಚು ಸಿನಿಮಾ ಅವಕಾಶಗಳು ಬರುತಿತ್ತು.

ವೃತ್ತಿಜೀವನದ ಮೇಲೆ ಗಮನಹರಿಸುವ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುತ್ತಿದ್ದೇವೆ ಎಂದಿದ್ದಾರೆ.
ಎಲ್ಲಾ ವಿಚಾರಗಳಲ್ಲಿ ಇಬ್ಬರಲ್ಲಿಯೂ ಭಿನ್ನಾಭಿಪ್ರಾಯಗಳಿವೆ ಪರಸ್ಪರ ಒಪ್ಪಿಗೆ ಮೇರೆಗೆ ಬೇರೆಯಾಗುತ್ತಿದ್ದೇವೆ ಎಂದು ಜಡ್ಜ್ ಮುಂದೆ ಇಬ್ಬರು ಹೇಳಿಕೆ ನೀಡಿದ್ದಾರೆ.
ವಿದೇಶದಲ್ಲಿ ನಿವೇದಿತ ಗೌಡ ವಿದ್ಯಾಭ್ಯಾಸ ಮಾಡಲು ಬಯಸಿದ್ದೇನೆ ಎಂದು ಡಿವೋರ್ಸ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಇಬ್ಬರೂ ಕೈ ಕೈ ಹಿಡಿದುಕೊಂಡು. ಕೋರ್ಟ್ ಹಾಲಿಗೆ ಬಂದ ಜೋಡಿ ಅಕ್ಕ ಪಕ್ಕವೇ ಕುಳಿತಿದ್ದಾರೆ.
ನಿವೇದಿತ ಗೌಡ ವಿದೇಶಕ್ಕೆ ತೆರಳಲು ಬಯಸಿದ್ದಾರೆ ಹೀಗಾಗಿಯೇ ಇಬ್ಬರು ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಚಂದನ್ ಶೆಟ್ಟಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಮತ್ತೊಂದು ಕಡೆ ಚಂದನ್ ಶೆಟ್ಟಿ ಕೂಡ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ರ್ಯಾಪ್ ಸಾಂಗ್ ಮಾಡುತ್ತಾ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ವಿಚ್ಛೇದನ ಒಪ್ಪಿಗೆ ಪತ್ರಕ್ಕೆ ಸಹಿಮಾಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕೋರ್ಟ್‌ನಿಂದ ಹೊರಬಂದಿದ್ದಾರೆ. ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಹೊರಟಿದ್ದಾರೆ. ಒಪ್ಪಿಗೆ ಪತ್ರಕ್ಕೆ ಸಹಿ ಹಿನ್ನಲೆ 2ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ಇಬ್ಬರಿಗೂ ವಿಚ್ಛೇದನ ಮಂಜೂರು ಮಾಡಿದೆ.
4 ವರ್ಷಗಳ ಹಿಂದೆ ಮದುವೆ ಆಗಿದ್ದ ಜೋಡಿ ಇದೀಗ ದೂರವಾಗಿದ್ದಾರೆ. ಈ ಬಗ್ಗೆ ಇಬ್ಬರೂ ಇನ್ನು ಪ್ರತಿಕ್ರಿಯಿಸಿಲ್ಲ. ಶೀಘ್ರದಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.






