ಸಾಂಸ್ಕೃತಿಕ

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ- ನಿವೇದಿತಾ ಗೌಡ ಡಿವೋರ್ಸ್..!

Views: 474

ಚಂದನ್ ಶೆಟ್ಟಿ- ನಟಿ ನಿವೇದಿತಾ ಗೌಡ ದಿಢೀರ್ ಅಂತಾ ಡಿವೋರ್ಸ್ ಮಾಡಿಕೊಂಡಿದ್ದಾರೆ. ಸುಮಾರು 4 ವರ್ಷಗಳ ಹಿಂದೆ 2020ರಲ್ಲಿ ಫೆಬ್ರವರಿ 26ನೇ ತಾರೀಕಿನಂದು ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಆಗಿದ್ದರು. ಈ ಜೋಡಿ ಡಿವೋರ್ಸ್ ಸುದ್ದಿ ಕೇಳಿ ಎಲ್ಲರಿಗೂ ಶಾಕ್ ಆಗಿದೆ. ಇಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಡಿವೋರ್ಸ್ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ನಿನ್ನೆಯಷ್ಟೇ ಫ್ಯಾಮಿಲಿ ಕೋರ್ಟ್‌ನಲ್ಲಿ ಚಂದನ್ ಶೆಟ್ಟಿ ದಂಪತಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್ ಅರ್ಜಿಯಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಜೊತೆ ಸಹಬಾಳ್ವೆ ನಿಲ್ಲಿಸಲು ಮುಂದಾಗಿದ್ದೇವೆ ಎಂದಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಅರ್ಜಿ ಕೋರಲಾಗಿದೆ.

ಚಂದನ್ ಶೆಟ್ಟಿ, ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್‌ಗೆ ಇಬ್ಬರೂ ಒಪ್ಪಿರುವುದರಿಂದ ಇಬ್ಬರಿಗೂ ಒಬ್ಬರೇ ಮಹಿಳಾ ವಕೀಲರಿದ್ದಾರೆ. ಡಿವೋರ್ಸ್‌ಗಾಗಿ ಫ್ಯಾಮಿಲಿ ಕೋರ್ಟ್‌ಗೆ ಚಂದನ್ ಶೆಟ್ಟಿ, ನಿವೇದಿತಾ ಗೌಡ ಹಾಜರಾಗಿದ್ದಾರೆ.

ಚಂದನ್ ಮತ್ತು ನಿವೇದಿತಾ ಇಬ್ಬರೂ ಕ್ಯೂಟ್ ಕಪಲ್ ಎಂದೇ ಹೆಸರುವಾಸಿಯಾಗಿದ್ದರು. 2018ರ ಬಿಗ್ ಬಾಸ್ ಸೀಸನ್‌ 5ರಲ್ಲಿ ಪರಿಚಯವಾಗಿದ್ದ ಚಂದನ್ & ನಿವೇದಿತಾ ಜೋಡಿ 2019ರಲ್ಲಿ ಮೈಸೂರು ದಸರಾದ ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರಪೋಸ್ ಮಾಡಿ ಸುದ್ದಿಯಾಗಿದ್ದರು.

ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರ ಮದುವೆಯನ್ನು ಕುಟುಂಬಸ್ಥರು ಬಹಳ ಅದ್ಧೂರಿಯಾಗಿ ಮಾಡಿದ್ದರು. ಈ ತಾರಾ ಜೋಡಿ ರಾಜ-ರಾಣಿ ಸೇರಿದಂತೆ ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡುತ್ತಾ ಎಲ್ಲರ ಮನಸು ಗೆದ್ದಿದ್ದ ಕಪಲ್ ಈಗ ಬೇರೆ, ಬೇರೆ ಆಗಲು ತೀರ್ಮಾನಿಸಿದೆ.

Related Articles

Back to top button
error: Content is protected !!