ಸಾಂಸ್ಕೃತಿಕ

ಮೇಳದ ಚೌಕಿಯಲ್ಲಿಯೇ ಪುರಾಣ ಗ್ರಂಥಗಳನ್ನು ಇಟ್ಟಾಗ ಕಲಾವಿದರು ಓದಿ ಅಧ್ಯಯನಶೀಲರಾಗುತ್ತಾರೆ : ಪ್ರಸಂಗಕರ್ತ ಡಾ.ಬಸವರಾಜ್ ಶೆಟ್ಟಿಗಾರ್‌

Views: 82

ಕುಂದಾಪುರ :ಮಾರಣಕಟ್ಟೆ ಯಕ್ಷಗಾನ ಮೇಳಗಳ ಕೊನೆಯ ದೇವರ ಸೇವೆ ಆಟ ಇತ್ತೀಚೆಗೆ ನಡೆಯಿತು.

ಇದೇ ಸಂದರ್ಭದಲ್ಲಿ ಕಲಾವಿದರಿಗೆ ಗೌರವಿಸುವ ಕಾರ್ಯಕ್ರಮದಲ್ಲಿ ವಾಸ್ತುತಜ್ಙ, ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್‌ರವರು ಮಾತನಾಡಿ, ಕಲಾವಿದರಿಗೆ ಹೆಚ್ಚಿನ ಅಧ್ಯಯನಕ್ಕಾಗಿ ಪುರಾಣ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಾಗವತ, ದೇವಿ ಭಾಗವತ, ಅಷ್ಠದಶ ಪುರಾಣಗಳ ಒಂದೊಂದು ಪ್ರತಿ ಮೇಳದ ಚೌಕಿಯಲ್ಲಿದ್ದರೆ ಕಲಾವಿದರು ಬಿಡುವಿದ್ದಾಗ ಗ್ರಂಥಗಳನ್ನು ಓದಿ ಸದಾ ಅಧ್ಯಯನಶೀಲರಾಗಿ, ವ್ಯಕ್ತಿತ್ವ, ಜ್ಞಾನಾಭಿವೃದ್ಧಿಯಾಗಿ ಕಲೆಯು ಉನ್ನತ ಮಟ್ಟದಲ್ಲಿ ಬೆಳೆಯುತ್ತದೆ ಎಂದರು.

ಅವರು ಮೇಳದ ಯಜಮಾನರಿಗೆ ಸೂಚನೆಯನ್ನು ನೀಡುತ್ತಾ ಮಾತನಾಡಿ, ನಿಮ್ಮದೇ ಮೇಳ ಕೂಡಾಟ ಇರುವಾಗ ಬೆಳಗಿನ ಜಾವದಲ್ಲಿ ಒಂದು ಪ್ರಸಂಗವನ್ನಾದರೂ ಜೋಡಾಟ ಮಾಡಿದರೆ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚುವುದರೊಂದಿಗೆ ಬ್ರಾಹ್ಮೀ ಮೂಹೂರ್ತದ ವರೆಗೆ ಬೆಳಕಿನ ಸೇವೆ ಮಾಡಿದ ಹರಕೆದಾರರು ಸಾರ್ಥಕ್ಯವನ್ನು ಪಡೆಯುತ್ತಾರೆ ಎಂದರು.

ಈ ಸಂದರ್ಭದಲ್ಲಿ ಮೇಳದ ನಿವೃತ್ತ ಮ್ಯಾನೇಜರ್ ರಾಜೀವ್ ಶೆಟ್ಟಿ ವಂಡ್ಸೆ, ನಿವೃತ್ತ ಕಲಾವಿದರಾದ ಬಿ.ಎಚ್.ಮೂರ್ತಿಗೌಡ ಗುಡ್ಡಿಕೆರೆ, ನಿವೃತ್ತ ಸಹಾಯಕ ಸಿಬ್ಬಂದಿಯಾದ ಸಂಜೀವ ಗಾಣಿಗವರಿಗೆ ಕಲಾಕಾಣಿಕೆಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಮಾರಣಕಟ್ಟೆ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಸಿ. ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾರಣಕಟ್ಟೆ ದೇವಸ್ಥಾನದ ಮಾಜಿ ಧರ್ಮದರ್ಶಿ ಮಂಜಯ್ಯ ಶೆಟ್ಟಿ, ಹಿರಿಯ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.

ದಿನಕರ ಶೆಟ್ಟಿ, ಅಶೋಕ್ ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಗೋವರ್ಧನ ಶೆಟ್ಟಿ, ಆದರ್ಶ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಮಂಜಯ್ಯ ಶೆಟ್ಟಿ, ಕೆ.ಸಿ.ಸುರೇಂದ್ರ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಅರ್ಚಕ ವೃಂದದವರು ಉಪಸ್ಥಿತರಿದ್ದು ಶುಭಹಾರೈಸಿದರು. ಸಿ.ರಘುರಾಮ್ ಶೆಟ್ಟಿ ಸ್ವಾಗತಿಸಿದರು. ಶಂಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Related Articles

Back to top button
error: Content is protected !!