ಜನಮನ

ಕುಂದಾಪುರ:ಅಸೋಡಿನಿಂದ ಮಾಲಾಡಿವರೆಗೆ ವಾರಾಹಿ ನೀರಾವರಿ ಯೋಜನೆಗೆ ಪ್ರಾಯೋಗಿಕ ಚಾಲನೆ, ರೈತರು ಹರ್ಷ!

Views: 229

ಕುಂದಾಪುರ: ಅಸೋಡಿನಿಂದ, ಕಾಳಾವರ, ವಕ್ವಾಡಿ, ಮಾಲಾಡಿ ವರಗಿನ ವಾರಾಹಿ ನೀರಾವರಿ ಯೋಜನೆಗೆ ಇಂದು ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು.ಇಲ್ಲಿನ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ವಾರಾಹಿ ಕಾಲುವೆ ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ನೀರು ಹರಿಸದೆ ಇರುವುದರಿಂದ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಉಳಿದ ಕಾಮಗಾರಿಯನ್ನು ಮುಗಿಸಿ ನೀರು ಹರಿಸುವಂತೆ ಒತ್ತಾಯಿಸಲಾಗಿದೆ. ಇತ್ತೀಚೆಗೆ ಕಾಳಾವರ ಗ್ರಾಮ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಕಾಲುವೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಸಮಿತಿಯವರು ಬೇಸರ ವ್ಯಕ್ತಪಡಿಸಿದರು.

ಅಸೋಡು ಇಲ್ಲಿಂದ ಮಾಲಾಡಿ ವರೆಗಿನ ಕಾಲುವೆ  2.3 ಎತ್ತರ 4 ಕ್ಯೂಸೆಕ್ಸ್ ನೀರನ್ನು ಇಂದು ಬಿಡಲಾಗಿದೆ.

ಈ ಸಂದರ್ಭದಲ್ಲಿ ವಾರಾಹಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಸನ್ನ ,ಸಹಾಯಕ ಇಂಜಿನಿಯರ್ ಪ್ರಸನ್ನ, ಕೊಂಕಣ್ ರೈಲ್ವೆ ಮೇಲ್ವಿಚಾರಕ ಮಹೇಶ್ ಉಪಸ್ಥಿತರಿದ್ದರು.ಒಂದು ವರ್ಷದ ಹಿಂದೆ ಕೊಂಕಣ್ ರೈಲ್ವೆ ಹಳಿಯಲ್ಲಿ ಅಂಡರ್ ಗ್ರೌಂಡ್ ಕಾಮಗಾರಿಕೆಯಿಂದ ಈ ಯೋಜನೆಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದ ಅವರು ಮಾಲಾಡಿವರೆಗೆ ಐದು ಉಪ ತೋಡಿಗೆ ನೀರು ಹರಿಸುವ ಯೋಜನೆ ಇದ್ದು, ಮಳೆಗಾಲದ ನಂತರ ಮತ್ತೆ ಇನ್ನು ಹೆಚ್ಚಿನ ಉಪ ಯೋಜನೆಗೆ ಯೋಜನೆಗೆ ಚಾಲನೆ ನೀಡಲಾಗುವುದೆಂದು ಸಹಾಯಕ ಇಂಜಿನಿಯರ್ ಪ್ರಸನ್ನ ಹೇಳಿದರು.

oppo_2

 

Related Articles

Back to top button
error: Content is protected !!