ಕರಾವಳಿ
ನವವಿವಾಹಿತ ಕೆರೆಗೆ ಬಿದ್ದು ಮೃತ್ಯು

Views: 80
ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಂದಿಬೆಟ್ಟದ ಹೊಸವಕ್ಲು ನಿವಾಸಿ, ಸದಾಶಿವ ಶೆಟ್ಟಿಯವರ ಏಕೈಕ ಪುತ್ರ, ನವ ವಿವಾಹಿತ ಶೈಲೇಶ್ ಶೆಟ್ಟಿ (38) ಅವರ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಮನೆಯಲ್ಲಿಯೇ ಕೃಷಿ ಮಾಡಿಕೊಂಡಿದ್ದ ಇವರಿಗೆ ಕಳೆದ ಆರು ತಿಂಗಳ ಹಿಂದೆಯಷ್ಟೇ ವಿವಾಹ ಆಗಿತ್ತು ಮೇ 25ರಂದು ರಾತ್ರಿ ಕೆರೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಬೆಳ್ತಂಗಡಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಮೃತದೇಹ ಮೇಲಕ್ಕೆ ಎತ್ತಿದ್ದಾರೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.






