ಜನಮನ

ಸಾಲಿಕೇರಿ ಪ್ರಾಚೀನ ಶೇಡಿಕೆರೆ ದುರಸ್ತಿ ಅಗ್ರಹಕ್ಕೆ ಸ್ಪಂಧಿಸಿದ ವೈದ್ಯರ ಮಹತ್ಕಾರ್ಯಕ್ಕೆ ಅಭಿನಂದನೆಯ ಮಹಾಪೂರ!

Views: 349

ಬ್ರಹ್ಮಾವರ: ಎಂಟು ಶತಮಾನಗಳ ಇತಿಹಾಸ ಇರುವ ಹೂಳು ತುಂಬಿ ದುರ್ನಾತ ಭೀರುತ್ತಿರುವ ಉಡುಪಿ ತಾಲೂಕಿನ ಸಾಲಿಕೇರಿ ಶೇಡಿಕೆರೆ ದುರಸ್ತಿಗಾಗಿ ಮಾಡಿದ ಅಗ್ರಹಕ್ಕೆ ಜೀವ ಉಳಿಸುವ ವೈದ್ಯರೊಬ್ಬರು ಸ್ಪಂಧಿಸಿ ಕೆರೆಯ ಹೂಳೆತ್ತಿ ದುರಸ್ತಿ ಮಾಡಿ ಮತ್ತೆ ಸಾರ್ವಜನಿಕರ ಉಪಯೋಗಕ್ಕೆ ನೀಡಿದ ವೈದ್ಯ ಡಾ.ಸತೀಶ್ ಕಾಮತ್ ಅವರ ಮಹತ್ಕಾರ್ಯಕ್ಕೆ ಅಭಿನಂದನೆಯ ಮಹಾಪೂರವೆ ಹರಿದು ಬಂದಿದೆ.

ಹೂಳು ತುಂಬಿದ ಕೆರೆಯಲ್ಲಿ ಪಾಚಿ, ಅಂತರ್ ಗಂಗೆಯಿಂದ ದುರ್ವಾಸನೆ ಬೀರುತ್ತಿದ್ದು, ರೋಗ ಹರಡುವ ಬೀತಿಯಿಂದ ಉಪಯೋಗಕ್ಕೆ ಬಾರದ ಈ ಕೆರೆಯು ದುರಸ್ತಿ ಮಾಡಿ ಮತ್ತೆ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿಯವರು ಮನವಿ ಮಾಡಿಕೊಂಡಿದ್ದರು.

ಹೂಳು ತುಂಬಿದ ಕೆರೆ

ಸಾಲಿಕೇರಿ ದೇವಸ್ಥಾನದಿಂದ 500 ಮೀ ದೂರದಲ್ಲಿದೆ. ದೇವಳದ ಉತ್ಸವಕ್ಕೆ ಈ ಕೆರೆಯು ಬಹಳ ಹಿಂದೆ ಮೇ ತಿಂಗಳ ಕೊನೆಯವರೆಗೂ ಧಾರಾಳವಾಗಿ ನೀರು ಸಂಗ್ರಹವಾಗಿ ಕೆರೆಯ ಸುತ್ತ ಮುತ್ತಲಿನ ಜನರಿಗೆ ಕೃಷಿ, ಉಪ ಬೆಳೆಗಳಿಗೆ ಕೆರೆಯ ನೀರು ಉಪಯೋಗವಾಗುತ್ತಿತ್ತು. ನೀರಿನ ಸಂಗ್ರಹದಿಂದ ಅಂತರ್ ಜಲ ವೃದ್ಧಿಯಿಂದ ಬಾವಿಗಳು ನೀರು ತುಂಬಿ ತುಳುಕುತ್ತಿತ್ತು.

ಆದರೆ, ಇತ್ತೀಚೆಗೆ ಈ ಕೆರೆಯಲ್ಲಿ ಅಂತರ್ ಗಂಗೆ, ಪಾಚಿ, ಹೂಳು ತುಂಬಿ ದುವಾ೯ಸನೆಯಿಂದ ಇಲ್ಲಿನ ಜನರಿಗೆ ರೋಗ ಹರಡುವ ಭೀತಿ ಉಂಟಾಗಿದ್ದು,

ಈ ಕುರಿತು ಇಲ್ಲಿನ ಸಮಸ್ತ ಜನತೆಯ ಪರವಾಗಿ ಬೈಕಾಡಿ ಭಾಸ್ಕರ್ ಶೆಟ್ಟಿಗಾರ್ ಅವರು ಮಾಧ್ಯಮಕ್ಕೆ ಮನವಿ ಮಾಡಿಕೊಂಡಾಗ “ಕನ್ನಡ ಕರಾವಳಿ” ವಿಸ್ತೃತ ವರದಿ ಮಾ.25. 2023 ರಂದು ಪ್ರಕಟವಾಗಿತ್ತು.

ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ತಿಳಿದ ಉಡುಪಿಯ ಖ್ಯಾತ ವೈದ್ಯ ಡಾ.ಸತೀಶ್ ಕಾಮತ್ ಇದಕ್ಕೆ ಸ್ಪಂದಿಸಿ, ತನ್ನ ಸ್ವಂತ ಖರ್ಚಿನಲ್ಲಿ ಈ ಕೆರೆಯ ಹೂಳೆತ್ತುವ ಕೆಲಸ ಕೈಗೊಂಡು ಇದೀಗ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಟ್ಟಿದ್ದಾರೆ. ಇವರು ಮಾಡಿದ ಮಹತ್ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮಹಾಪೂರದ ಅಭಿನಂದನೆಗಳು ಹರಿದು ಬಂದಿದೆ.

ವರ್ಷಕ್ಕೆ ಒಂದು ಕೆರೆಯಂತೆ ಕುಂಭಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು, ಸಾಲಿಗ್ರಾಮ ಕಾರ್ಕಡದಲ್ಲಿ ಒಂದು, ಇದೀಗ ಸಾಲಿಕೇರಿಯ ಶೇಡಿಕೆರೆಯ ಹೂಳೆತ್ತುವ ಕೆಲಸವನ್ನು ನಿವೃತ್ತ ಇಂಜಿನಿಯರ್ ಕೃಷ್ಣ ಹೆಬ್ಸೂರ್ ನೇತೃತ್ವದಲ್ಲಿ ಕೆರೆಯ ಹೂಳೆತ್ತಿ ದುರಸ್ತಿಯನ್ನು ವೈದ್ಯರು ಮಾಡಿಕೊಟ್ಟಿದ್ದಾರೆ.

ಡಾ.ಸತೀಶ್ ಕಾಮತ್ ಹೇಳಿದ್ದೇನು?

ಪ್ರಕೃತಿಗೆ ಮನುಷ್ಯನಾದವನು ಏನನ್ನಾದರೂ ಕೊಡುಗೆ ನೀಡಿದರೆ, ಪ್ರಾಣಿ-ಪಕ್ಷಿಗಳು ಜೀವಸಂಕುಲಕ್ಕೆ ಇದರ ಪ್ರಯೋಜನವಾಗುತ್ತದೆ ಇಲ್ಲಿ ನಾನು ಕೇವಲ ಪ್ರೇರಣೆ ಅಷ್ಟೇ..ನಾವು ಮಾಡಿದ ಕೆಲಸಕ್ಕೆ ಯುವ ಜನತೆ, ಊರಿನ ಜನರು ಮಾದರಿಯಾದರೆ ಅದರ ಸಂದೇಶ ನೂರು ಜನರಿಗೆ ತಲುಪಿದರೆ. 10 ಜನರಿಗೆ ಮಾಡುವ ಮನಸ್ಸು ಬಂದರೆ, ಅದನ್ನು ಯಾರಾದರೂ ಒಬ್ಬರು ಕಾರ್ಯಗತ ಮಾಡಿದರೆ ನಮ್ಮ ಉದ್ದೇಶ ಸಾರ್ಥಕ ಎಂದು ಹೇಳಿದ್ದಾರೆ

ಊರಿಗೆ ಒಂದು ದೇವಸ್ಥಾನವಿದ್ದರೆ ಒಳ್ಳೆಯ ಸಂಸ್ಕಾರ, ಸದ್ಭಾವ- ಸದ್ಗುಣಗಳು ಬೆಳೆಸುತ್ತೆ, ಅದೇ ರೀತಿಯಲ್ಲಿ ಊರಿಗೆ ಒಂದು ಮರವಿದ್ದರೆ ಎಲ್ಲರಿಗೂ ಆಶ್ರಯ ನೀಡುತ್ತೆ, ಊರಿಗೊಂದು ಕೆರೆ ಇದ್ದರೆ ಎರಡು ಕಿ.ಮೀಟರ್ ವ್ಯಾಪ್ತಿಯ ವರೆಗೂ ಅಂತರ್ಜಲ ಹೆಚ್ಚಿಸಿ ಸುತ್ತಮುತ್ತ ಬಾವಿಯಲ್ಲಿ ನೀರು ಸಿಗುತ್ತದೆ ಎಂದಿದ್ದಾರೆ.

ಅಭಿನಂದಿಸಿದ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿಗಾರ್

ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಸುರೇಶ್ ಶೆಟ್ಟಿಗಾರ್ ಇವರ ಪ್ರಕಾರ ಇಡೀ ಗ್ರಾಮಕ್ಕೆ ಉಪಯೋಗಕ್ಕೆ ಬರುವಂತಹ ಕೆರೆ ಇದಾಗಿದ್ದು ಜಾತ್ರೆಯ ಸಮಯದಲ್ಲಿ ದೇವರಿಗೆ ಅವಭೃತ ಸ್ನಾನ ಮಾಡಿಕೊಂಡು ಹೋಗುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ನಮ್ಮ ಆಗೃಹಕ್ಕೆ ಸ್ಪಂಧಿಸಿದ ಡಾ. ಸತೀಶ್ ಕಾಮತ್ ರವರಿಗೆ ಅವರ ಸಮಾಜ ಸೇವಾ ಕೈಂಕರ್ಯದೊಂದಿಗೆ ಈ ಪ್ರಾಚೀನ ಕರೆಯನ್ನು ಹೂಳು ಎತ್ತಿ ಇಲ್ಲಿನ ಸಾರ್ವಜನಿಕರಿಗೆ ಉಪಯುಕ್ತವಾಗಿ ಮಾಡಿಕೊಟ್ಟು,ಇಲ್ಲಿನ ಜನರಿಗೆ ಬೇಸಾಯಕ್ಕೆ, ನೀರಿನ ಆಶ್ರಯ ಸಿಗುವಂತೆ ಮಾಡಿದ ವೈದ್ಯರಿಗೆ ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿ ಶ್ರೀ ದೇವರು ನೀಡಲಿ ಎಂಬುದಾಗಿ ಅಭಿನಂದಿಸಿದ್ದಾರೆ.

———–ಸುಧಾಕರ ವಕ್ವಾಡಿ, ಕನ್ನಡ ಕರಾವಳಿ

 

Related Articles

Back to top button
error: Content is protected !!