ಕರಾವಳಿ

ಕುಂದಾಪುರ :ವಕ್ವಾಡಿಯಲ್ಲಿ ಮನೆಗೆ ಸಿಡಿಲು ಬಡಿದು ಹಾನಿ

Views: 494

ಕುಂದಾಪುರ: ತಾಲೂಕಿನಾದ್ಯಂತ ಶನಿವಾರ ರಾತ್ರಿ ಗುಡುಗು ಮಿಂಚು ಸಹಿತ ಮಳೆ ಸುರಿದಿದ್ದು, ವಕ್ವಾಡಿ ಗ್ರಾಮದ ಶಾರದ ಶೆಟ್ಟಿಗಾರ್ ಅವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.

ರಾತ್ರಿ 11 ಗಂಟೆ ಸುಮಾರಿಗೆ ಮನೆಯ ಹತ್ತಿರದ ತೆಂಗಿನ ಮರ ಮತ್ತು ಅಡಿಕೆ ಮರಕ್ಕೆ ಸಿಡಿಲು ಬಡಿದಿದ್ದು ನಂತರ ನೆಲವನ್ನು ಆಗೆದುಕೊಂಡು ಹೋಗಿ ಮನೆಯ ಪಂಚಾಂಗಕ್ಕೆ ಅಪ್ಪಳಿಸಿದೆ.

ಸಿಡಿಲ ಅಘಾತಕ್ಕೆ ಮನೆಯ ವೈರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು ಯುಪಿಎಸ್, ಫ್ಯಾನ್ ಗಳು, ಮೀಟರ್ ಬೋರ್ಡ್, ಸ್ವಿಚ್ ಬೋರ್ಡ್ ಗಳು ಸಂಪೂರ್ಣ ಸಿಡಿದು ಹೋಗಿದೆ.

ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದ 50 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

oppo_2
oppo_34

 

Related Articles

Back to top button
error: Content is protected !!