ಸಾಂಸ್ಕೃತಿಕ

ನಟಿ ಪವಿತ್ರಾ ಜಯರಾಮ್ ಸಾವಿನ ಬೆನ್ನಲ್ಲೇ ಗೆಳೆಯ ನಟ ಚಂದು ಆತ್ಮಹತ್ಯೆ 

Views: 236

ಕನ್ನಡ ನಟಿ ಪವಿತ್ರಾ ಜಯರಾಮ್ ಇತ್ತೀಚೆಗೆ ಹೈದರಾಬಾದ್ ಸಮೀಪ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ವೇಳೆ ಅವರ ಗೆಳೆಯ ಹಾಗೂ ತೆಲುಗು ನಟ ಚಂದು ಕೂಡ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು.

ಪವಿತ್ರಾ ಜಯರಾಂ ಸಾವಿನನಿಂದ ನೊಂದಿದ್ದ ಗೆಳೆಯ ಹಾಗೂ ದಾರಾವಾಹಿ ನಟ ಚಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಹೈದರಾಬಾದ್‌ನ ಮಣಿಕೊಂಡದಲ್ಲಿರುವ ಚಂದು ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಚಂದು ಹಾಗೂ ಪವಿತ್ರಾ ಜಯರಾಮ್ ಇಬ್ಬರೂ ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಚಂದು ಅದಾಗಲೇ ಹಲವು ತೆಲುಗು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಪವಿತ್ರಾ ಹಾಗೂ ಚಂದ್ರು ಇಬ್ಬರೂ ಸೋಶಿಯಲ್ ಮೀಡಿಯಾಗಳಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ದರ್ಶನ್ ಸಿನಿಮಾ ‘ಡೆವಿಲ್‌’ನಲ್ಲಿ ನಟಿಸಲು ಪವಿತ್ರಾ ಜಯರಾಂಗೆ ಆಫರ್ ಬಂದಿತ್ತು. ಹೀಗಾಗಿ ಆ ಸಿನಿಮಾಗೆ ಸಹಿ ಮಾಡಲು ಬೆಂಗಳೂರಿಗೆ ಪವಿತ್ರಾ ಜೊತೆ ಚಂದು ಕೂಡ ಬಂದಿದ್ದರು.

ಬೆಂಗಳೂರಿನಿಂದ ಹಿಂತಿರುಗುವಾಗ ಪ್ರಯಾಣಿಸುತ್ತಿರುವ ಕಾರು ಅಪಘಾತವಾಗಿತ್ತು. ಈ ವೇಳೆ ನಟಿ ಪವಿತ್ರಾ ಜಯರಾಮ್ ಸಾವನ್ನಪ್ಪಿದರೆ, ಚಂದು  (ಮೇ 17) ಆತ್ಮಹತ್ಯೆ ಶರಣಾಗಿದ್ದಾರೆ.

ಚಂದು ಆತ್ಮಹತ್ಯೆ ಬಗ್ಗೆ ಸದ್ಯ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಆದರೆ, ಗೆಳತಿ ಪವಿತ್ರಾ ಜಯರಾಂ ಸಾವಿನ ಬಳಿಕ ನೊಂದು ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಪವಿತ್ರಾ ಜಯರಾಂ ಸಾವಿಗೆ ಆಂಬುಲೆನ್ಸ್ ತಡವಾಗಿ ಬಂದಿದ್ದೇ ಕಾರಣವೆಂದು ಚಂದು ಆರೋಪ ಮಾಡಿದ್ದರು.

ಚಂದು ಹಾಗೂ ಪವಿತ್ರಾ ಜಯರಾಮ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಒಂದೇ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದರಿಂದ ಆತ್ಮೀಯರಾಗಿದ್ದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎನ್ನಲಾಗಿದೆ. ಚಂದು ಈಗ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದುಗೆ 2015ರಲ್ಲೇ ಶಿಲ್ಪಾ ಎಂಬುವವರೊಂದಿಗೆ ಮದುವೆ ಆಗಿತ್ತು. ಅವರಿಗೆ ಎರಡು ಮಕ್ಕಳಿದ್ದಾರೆ. ಇತ್ತ ನಟಿ ಪವಿತ್ರಾ ಜಯರಾಮ್ ಕೂಡ ಮದುವೆ ಆಗಿ ವಿಚ್ಛೇದನ ಪಡೆದಿದ್ದಾರೆ. ಅವರಿಗೂ ಇಬ್ಬರು ಮಕ್ಕಳಿದ್ದು, ಚಂದು ಜೊತೆ ಮದುವೆ ಆಗುವ ಆಲೋಚನೆಯಲ್ಲಿದ್ದರು ಎನ್ನಲಾಗಿದೆ. ಅಷ್ಟರೊಳಗೆ ಇಬ್ಬರೂ ಬದುಕು ದುರಂತ ಅಂತ್ಯ ಕಂಡಿದ್ದಾರೆ.

Related Articles

Back to top button
error: Content is protected !!