ಕುಂದಾಪುರ: ಲೈಂಗಿಕ ದೌರ್ಜನ್ಯ ಪ್ರಕರಣ:ಕೇಶವ ಕೋಟೇಶ್ವರ ಬಿಡುಗಡೆ, ತೀರ್ಪು ನೀಡಿದ ಪೋಕ್ಸೋ ನ್ಯಾಯಾಲಯ

Views: 533
ಉಡುಪಿ: ಕುಂದಾಪುರ ತಾಲೂಕಿನ ಸ್ಫೂರ್ತಿಧಾಮ ಸಂಸ್ಥೆಯ ಪುನರ್ವಸತಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿ 2ನೇ ಆರೋಪಿ ಕೇಶವ ಕೋಟೇಶ್ವರ ಅವರನ್ನು ಬಿಡುಗಡೆಗೊಳಿಸಿ ಉಡುಪಿ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ.
ಸಂಸ್ಥೆಯ ಕಾರ್ಯದರ್ಶಿ ಕೇಶವ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವಿತ್ತು. ಘಟನೆಯ ಬಗ್ಗೆ ಗೊತ್ತಿದ್ದರೂ ದೂರು ದಾಖಲಿಸಲು ವಿಫಲವಾಗಿರುವ ಕೇಶವ ಕೋಟೇಶ್ವರಗೆ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಕಾಲಾವಧಿಯನ್ನು ಪರಿಗಣಿಸಿ ಕೇಶವರಿಗೆ ವಿಧಿಸಿದ 1 ವರ್ಷದ ಶಿಕ್ಷೆ ಕಡಿತಗೊಳಿಸಿ ಬಿಡುಗಡೆ ಮಾಡಲಾಗಿದೆ. ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ತೀರ್ಪು ನೀಡಿದ್ದು, ಆರೋಪಿ ಪರ ವಕೀಲ ವಿಜಯ ವಾಸು ಪೂಜಾರಿ ವಾದ ಮಂಡಿಸಿದ್ದರು.
ಏನಿದು ಪ್ರಕರಣ
ಸ್ಪೂರ್ತಿಧಾಮದಲ್ಲಿ ಬಾಲಕ, ಬಾಲಕಿಯರು ಪುನವರ್ಸತಿಯಲ್ಲಿದ್ದು ಹನುಮಂತ ನೊಂದ ಬಾಲಕಿಯನ್ನು ಶಾಲೆಯ ಬಳಿ ಪರಿಚಯಿಸಿಕೊಂಡಿದ್ದನು. ಆ ಬಾಲಕಿಯನ್ನು ಪ್ರೀತಿಸುವುದಾಗಿ ಮತ್ತು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಆತನ ಕಾರಿನಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅಲ್ಲದೆ ಕೇಶವ ಕೋಟೇಶ್ವರ ಅವರ ಅಧೀನ ಸಂಸ್ಥೆಗೆ ರಾತ್ರಿ ಸಮಯದಲ್ಲಿ ಭೇಟಿ ನೀಡಿದ ಹನುಮಂತ, ಇತರ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ನೀಡಿ ಇಬ್ಬರು ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅದೇ ರೀತಿ ಹನುಮಂತ ನೊಂದ ಬಾಲಕಿಗೆ ಮೊಬೈಲ್ ತೆಗೆಸಿಕೊಟ್ಟಿದ್ದನು.
ಈ ಕುರಿತು ಇತರ ಮಕ್ಕಳನ್ನು ವಿಚಾರಿಸುವ ವೇಳೆ ಹನುಮಂತ ನೊಂದ ಬಾಲಕಿಗೆ ದೌರ್ಜನ್ಯ ಎಸಗಿರುವ ತಿಳಿದು ಬಂದಿದೆ.
ಅದರಂತೆ ಆಗಿನ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಕಪಿಲಾ ಬಾಲಕಿಯಿಂದ ಸಮಾಲೋಚನೆ ನಡೆಸಿ ಮಾಹಿತಿ ಪಡೆದು ಈ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಆಗಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಆಗಿನ ಉಡುಪಿ ಡಿವೈಎಸ್ಪಿ ಟಿ.ಆರ್.ಜೈಶಂಕರ್ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಒಟ್ಟು 62ಸಾಕ್ಷಿಗಳ ಪೈಕಿ 37ಸಾಕ್ಷಿಗಳ ವಿಚಾರಣೆ ಮಾಡಲಾಗಿದ್ದು, ಸಾಂದರ್ಭಿಕ ಸಾಕ್ಷಿ ಮತ್ತು ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷಿಗಳನ್ನು ಪರಿಗಣಿಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿತರು ತಪ್ಪಿತಸ್ಥರು ಎಂದು ಮನಗಂಡು ಶಿಕ್ಷೆ ವಿಧಿಸಿ ಆದೇಶ ನೀಡಿದರು.
ಹನುಮಂತಗೆ ಅತ್ಯಾಚಾರ ನಡೆಸಿದಕ್ಕಾಗಿ 10ವರ್ಷಗಳ ಜೈಲುಶಿಕ್ಷೆ ಮತ್ತು 20ಸಾವಿರ ರೂ. ದಂಡ ಮತ್ತು ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದಕ್ಕೆ 10ವರ್ಷಗಳ ಜೈಲುಶಿಕ್ಷೆ ಮತ್ತು 20ಸಾವಿರ ರೂ. ದಂಡ ಮತ್ತು ದೂರು ದಾಖಲಿಸದ ಕಾರಣಕ್ಕಾಗಿ ಕೇಶವ ಕೋಟೇಶ್ವರಗೆ ಒಂದು ವರ್ಷ ಸಾದಾ ಶಿಕ್ಷೆ ಮತ್ತು 10ಸಾವಿರ ರೂ. ದಂಡ ವಿಧಿಸಿ ಆದೇಶಿಸಲಾಗಿದೆ.
ಒಟ್ಟು ದಂಡದ ಮೊತ್ತ 50ಸಾವಿರ ರೂ.ನಲ್ಲಿ ಸರಕಾರಕ್ಕೆ 10ಸಾವಿರ ರೂ. ಮತ್ತು 20ಸಾವಿರ ರೂ. ತಲಾ ನೊಂದ ಬಾಲಕಿಯರಿಗೆ ಪರಿಹಾರವಾಗಿ ನೀಡುವಂತೆ ಮತ್ತುಪ ಸರಕಾರಿದಿಂದ ತಲಾ ಇಬ್ಬರು ನೊಂದ ಬಾಲಕಿಯರಿಗೆ 2ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ನಡೆಸಿದ್ದು, ಸರಕಾರಿ ಅಭಿಯೋಜಕ ಜಯರಾಮ್ ಶೆಟ್ಟಿ ವಾದ ಮಂಡಿಸಿದ್ದರು






