ಕರಾವಳಿ

ಧರ್ಮಸ್ಥಳ ಮೇಳದ ಚೆಂಡೆವಾದಕ ನಾಗರಾಜ ಆರಿಗ ಆತ್ಮಹತ್ಯೆ

Views: 297

ಪುತ್ತೂರು: ಇಚ್ಲಂಪಾಡಿ ಗ್ರಾಮದ ಬೀಡುಬೈಲು ನಿವಾಸಿ, ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಲ್ಲಿ ಮೇಲ್ವಿಚಾರಕ,ಚಂಡೆವಾದಕ  ನಾಗರಾಜ ಆರಿಗ (78) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ನಾಗರಾಜ ಆರಿಗ ಅವರು ಬೀಡುಬೈಲು ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಒಬ್ಬಂಟಿಯಾಗಿ ವಾಸವಾಗಿದ್ದರು. ಮನೆ ಕೆಲಸದವರಾದ ಸುಧಾಕರ ಅವರು ಮೇ 14ರಂದು ರಾತ್ರಿ ಮಲಗಲೆಂದು ಬಂದಾಗ ಮನೆಯಲ್ಲಿ ವಿದ್ಯುತ್‌ ದೀಪ ಉರಿಯುತ್ತಿರಲಿಲ್ಲ. ನಾಗರಾಜ ಆರಿಗ ಅವರನ್ನು ಕರೆದಾಗಲೂ ಪ್ರತಿಕ್ರಿಯೆ ಬಂದಿರಲಿಲ್ಲ. ಸ್ಥಳೀಯ ಪರಿಸರದಲ್ಲಿ ಹುಡುಕಾಟ ನಡೆಸಿದಾಗ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಮಾಹಿತಿ ಪಡೆದ ಪುತ್ರಿ ಮೇ 15ರಂದು ಬೆಳಗ್ಗೆ ಬಂದ ಬಳಿಕ ಮೃತದೇಹವನ್ನು ತೆಗೆಯಲಾಯಿತು. ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.

 

 

Related Articles

Back to top button
error: Content is protected !!