ಜನಮನ

ಶಿವಮೊಗ್ಗ:ಕುಡುಗೋಲಿನಿಂದ ಕತ್ತರಿಸಿ ವ್ಯಕ್ತಿಯ ಬರ್ಬರ ಕೊಲೆ

Views: 85

ಶಿವಮೊಗ್ಗ : ಜಮೀನು ವಿವಾದ ತಾರಕಕ್ಕೇರಿ ಶಿವಮೊಗ್ಗದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರ ಬರ್ಬರ ಕೊಲೆಯಾಗಿದೆ. ಸತೀಶ್ ನಾಯ್ಕ (28) ಕೊಲೆಯಾದ ದುರ್ದೈವಿ. ದೂರದ ಸಂಬಂಧಿ ಅಖಿಲೇಶ್ ಸೇರಿದಂತೆ ಹಲವರ ವಿರುದ್ಧ ಕೊಲೆ ಮಾಡಿದ ಆರೋಪ ಕೇಳಿಬಂದಿದೆ.

ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಹಲವು ವರ್ಷಗಳಿಂದ ಇವರಿಬ್ಬರ ಮಧ್ಯೆ ಜಮೀನು ವಿವಾದ ಇತ್ತು. ವಿವಾದ ಹಿನ್ನೆಲೆಯಲ್ಲಿ ಯಾರೂ ಕೂಡ ಜಮೀ‌ನಿನೊಳಗೆ ತೆರಳದಂತೆ ಕೋರ್ಟ್ ಆದೇಶ ನೀಡಿತ್ತು. ಇಂದು ಬೆಳಗ್ಗೆ ಜಮೀನಿಗೆ ಸತೀಶ್ ನಾಯ್ಕ ತೆರಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

ಸ್ಥಳದಲ್ಲಿದ್ದ ಗುಂಪು ಕುಡುಗೋಲಿನಿಂದ ಏಕಾಏಕಿ ಹಲ್ಲೆ ಮಾಡಿದೆ. ಪರಿಣಾಮ ಸತೀಶ್ ನಾಯ್ಕ್ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉದ್ರಿಕ್ತಗೊಂಡ ಹಲವರಿಂದ ಆರೋಪಿ ಮನೆ ಮೇಲೆ ಕಲ್ಲು ತೂರಾಟ ಕೂಡ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಮೂವರು ರೌಡಿಶೀಟರ್ಗಳ ಬರ್ಬರ ಕೊಲೆ ನಡೆದಿತ್ತು. ಈ ಬೆನ್ನಲ್ಲೇ ಜಮೀನು ವಿಚಾರಕ್ಕೆ ಮತ್ತೊಂದು ಭೀಕರ ಕೊಲೆ ನಡೆದಿದೆ.

Related Articles

Back to top button
error: Content is protected !!