ಇಂದು 2ನೇ ಹಂತದ ಮತದಾನ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ..? ಮೊಬೈಲ್ನಲ್ಲೇ ಚೆಕ್ ಮಾಡಿ
ಕರ್ನಾಟಕ ಸೇರಿ ದೇಶದ ಹಲವೆಡೆ ಮಂಗಳವಾರ ಮತದಾನ ನಡೆಯಲಿದ್ದು, ಯಾವುದಕ್ಕೂ ಮತಗಟ್ಟೆಗೆ ಹೊರಡುವ ಮುನ್ನ ಮತದಾನ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಒಮ್ಮೆ ಚೆಕ್ ಮಾಡುವುದು ಉತ್ತಮ. ಮನೆಯಲ್ಲೇ ಕುಳಿತು ಪರಿಶೀಲಿಸುವುದು ಹೇಗೆ..?

Views: 36
ಉಡುಪಿ:ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನವು ಇಂದು (ಮೇ 7) ನಡೆಯಲಿದೆ. ಕರ್ನಾಟದಲ್ಲಿ ಎರಡನೇ ಅಥವಾ ಕೊನೆಯ ಹಂತದ ಮತದಾನವೂ ಮಂಗಳವಾರವೇ ನಡೆಯಲಿದೆ. ಹೀಗಾಗಿ ಮತದಾರರ ಪಟ್ಟಿಯಲ್ಲೊಮ್ಮೆ ನಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ಇದಕ್ಕಾಗಿ ಮತಗಟ್ಟೆಗೆ ಹೋಗಬೇಕಾದ ಅವಶ್ಯಕತೆ ಈಗಿಲ್ಲ. ಸ್ಮಾರ್ಟ್ ಫೋನ್ ಕೈಯಲ್ಲಿ ಇದ್ದರೆ ಸಾಕು ಮನೆಯಲ್ಲೇ ಕುಳಿತು ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಅಥವಾ ಮತದಾರರ ಸೇವಾ ಪೋರ್ಟಲ್ ನಲ್ಲಿರುವ ಆನ್ ಲೈನ್ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆ ನಡೆಸಿ ಮತಗಟ್ಟೆಯ ಕುರಿತಾದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಈಗ ಅವಕಾಶವಿದೆ.
ಚೆಕ್ ಮಾಡುವುದು ಹೇಗೆ?
ಸ್ಮಾರ್ಟ್ ಫೋನ್ ನಲ್ಲಿ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಅಥವಾ ಮತದಾರರ ಸೇವಾ ಪೋರ್ಟಲ್ ಅನ್ನು ತೆರೆಯಿರಿ. ಬಳಿಕ ಅಲ್ಲಿ ಕೇಳಿರುವ ಅಗತ್ಯ ಮಾಹಿತಿಗಳನ್ನು ನಮೂದಿಸಿ. ಮುಖ್ಯವಾಗಿ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿದ ಬಳಿಕ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವಂತೆ ನಿಮ್ಮ ಪೂರ್ಣ ಹೆಸರು ಮತ್ತು ತಂದೆಯ ಹೆಸರನ್ನು ನಮೂದಿಸಬೇಕು. ಬಳಿಕ ಹುಟ್ಟಿದ ದಿನಾಂಕವನ್ನು ಹಾಕಿ ಎಪಿಕ್ (ಎಪಿಐಸಿ) ಸಂಖ್ಯೆಯನ್ನು ಹಾಕಿದ ಬಳಿಕ ಸರ್ಚ್ ಬಟನ್ ಒತ್ತಿದರೆ ಫಲಿತಾಂಶ ಪುಟ ತೆರೆದುಕೊಳ್ಳುತ್ತದೆ.
ನಿಮ್ಮ ಹೆಸರು ಈಗಾಗಲೇ ಮತದಾರರ ಪಟ್ಟಿಯಲ್ಲಿ ಇದ್ದರೆ ಎಪಿಕ್ ಸಂಖ್ಯೆ, ವಿಳಾಸ ಮತ್ತು ಮತಗಟ್ಟೆಯ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ಮತಗಟ್ಟೆಯ ಸ್ಥಳವನ್ನು ಮ್ಯಾಪ್ ಮೂಲಕ ಕ್ಲಿಕ್ ಮಾಡಿ ನೋಡಲು ಅವಕಾಶವೂ ಇಲ್ಲಿ ಇದೆ.
ಎಸ್ ಎಂಎಸ್ ಮೂಲಕವೂ ಪರಿಶೀಲಿಸಿ
ವೆಬ್ ಪೋರ್ಟಲ್ ಮಾತ್ರವಲ್ಲ ಈ ಎಲ್ಲ ಮಾಹಿತಿಯನ್ನು ಎಸ್ ಎಂಎಸ್ ಮೂಲಕವೂ ಪರಿಶೀಲನೆ ನಡೆಸಬಹುದು.
ಇದಕ್ಕಾಗಿ ಮೊಬೈಲ್ ಫೋನ್ ನಿಂದ 59191 ಕ್ಕೆ ಎಪಿಕ್ ಸಂಖ್ಯೆಯನ್ನು ಹೊಂದಿರುವ ಎಸ್ ಎಂಎಸ್ ಕಳುಹಿಸಿ ಅಥವಾ ಮತದಾರರ ಸಹಾಯವಾಣಿ 1800-111-950ಕ್ಕೆ ಕರೆ ಮಾಡಿ ಕೂಡ ಮಾಹಿತಿ ತಿಳಿದುಕೊಳ್ಳಬಹುದು.






